Saturday, May 4, 2024
Homeಕರಾವಳಿ“ಯಡಿಯೂರಪ್ಪ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ”- ಮಾಜಿ ಶಾಸಕ ವಸಂತ ಬಂಗೇರ

“ಯಡಿಯೂರಪ್ಪ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ”- ಮಾಜಿ ಶಾಸಕ ವಸಂತ ಬಂಗೇರ

spot_img
- Advertisement -
- Advertisement -

ಬೆಳ್ತಂಗಡಿ: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ ಎಂದು ಮಾಜಿ ಶಾಸಕ ವಸಂತ ಬಂಗೇರ ಅವರು ಹೇಳಿದ್ದಾರೆ.

‘1985ರಲ್ಲಿ ಕರ್ನಾಟಕದಲ್ಲಿ ನಾನು ಮತ್ತು ಯಡಿಯೂರಪ್ಪ ಇಬ್ಬರೇ ಬಿಜೆಪಿಯಲ್ಲಿ ವಿಧಾನಸಭಾ ಸದಸ್ಯರಾಗಿದ್ದೆವು. ಆ ಸಂದರ್ಭ ಪಕ್ಷವನ್ನು ಕಟ್ಟುವಲ್ಲಿ ನಾವಿಬ್ಬರೇ ಒಗ್ಗಟ್ಟಾಗಿ ಹೋರಾಟ ಮಾಡಿದ್ದೆವು’ ಎಂದಿದ್ದಾರೆ. ‘ಯಡಿಯೂರಪ್ಪ ಹೋರಾಟದ ಮನೋಭಾವ ಉಳ್ಳವರು. ಪ್ರಾರಂಭದ ಹಂತದಿಂದ ಇಂದು ಕೂಡಾ ತಮ್ಮ ಹೋರಾಟವನ್ನು ಮುಂದುವರಿಸಿಕೊಂಡು ವಿಜಯಿಯಾಗಿದ್ದಾರೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ರಾಜೀನಾಮೆ ನೀಡುವ ಈ ಸಂದರ್ಭದಲ್ಲಿ ನನ್ನ ಹೆಸರು ಹೇಳುವ ಅವಶ್ಯಕತೆ ಇರಲಿಲ್ಲ. ಆದರೂ ಅವರು ನನ್ನನ್ನು ಎರಡೆರಡು ಬಾರಿ ನೆನಪಿಸಿಕೊಂಡಿದ್ದಾರೆ ಎಂದರೆ ನಾನು ತುಂಬಾ ಸಂತೋಷ ಪಡುತ್ತಿದ್ದೇನೆ’ ಎಂದಿದ್ದಾರೆ.

‘ನಾವು ಸುಮಾರು 8 ವರ್ಷಗಳ ಕಾಲ ಒಟ್ಟಿಗಿದ್ದೆವು. ಆಗ ಅವರು ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಆಗಿರಲಿಲ್ಲ. ಶಾಸಕರಾಗಿದ್ದ ಅವರು ನನ್ನ ಜೊತೆ ತುಂಬಾ ಅನ್ಯೋನ್ಯತೆಯಿಂದ ಇದ್ದರು. ವಿಧಾನಸಭೆಯಲ್ಲಿ ನಾವಿಬ್ಬರೂ ಜೊತೆಯಾಗಿ ಹೋರಾಟ ಮಾಡುತ್ತಿದ್ದೆವು. ಯಡಿಯೂರಪ್ಪ ಈಗಲೂ ಹೋರಾಟದ ಮನೋಭಾವವನ್ನು ಮೈಗೂಡಿಸಿಕೊಂಡೇ ಇದ್ದಾರೆ’ ಎಂದಿದ್ದಾರೆ.

- Advertisement -
spot_img

Latest News

error: Content is protected !!