Thursday, June 4, 2026
Homeಕರಾವಳಿಬೆಳ್ತಂಗಡಿಯಲ್ಲಿ ಕೋಳಿ ಅನ್ ಲೋಡ್ ಮಾಡುವಾಗ ರಿಸರ್ವ್ ಬಂದು ಮಹಿಳೆಯ ಕಾಲ ಮೇಲೆ ಚಲಿಸಿದ ಟೆಂಪೋ

ಬೆಳ್ತಂಗಡಿಯಲ್ಲಿ ಕೋಳಿ ಅನ್ ಲೋಡ್ ಮಾಡುವಾಗ ರಿಸರ್ವ್ ಬಂದು ಮಹಿಳೆಯ ಕಾಲ ಮೇಲೆ ಚಲಿಸಿದ ಟೆಂಪೋ

- Advertisement -
- Advertisement -

ಬೆಳ್ತಂಗಡಿ : ಚಿಕನ್ ಸೆಂಟರ್‌ಗೆ ಕೋಳಿಗಳನ್ನು ಅನ್‌ಲೋಡ್ ಮಾಡಿ ರಿವರ್ಸ್ ತೆಗೆಯುವ ಸಂದರ್ಭದಲ್ಲಿ ಟೆಂಪೊ ವಾಹನವು ಹಿಂದೆ ನಿಂತಿದ್ದ ಮಹಿಳೆಯ ಕಾಲ ಮೇಲೆ ಚಲಿಸಿದ ಘಟನೆ ಬೆಳ್ತಂಗಡಿಯ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ಎಂಬಲ್ಲಿ ನಡೆದಿದೆ. ಮಹಿಳೆಯ ಕಾಲಿನ ಮೇಲೆ ಹಾದು ಹೋದ ಪರಿಣಾಮ ಕಾಲುಗಳಿಗೆ ಗಂಭೀರ ಗಾಯವಾಗಿದೆ.

ಪಡಂಗಡಿಯ ಮುಟ್ಟಿ (65) ಎಂಬವರ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಕೂಡಲೇ ಪಡಂಗಡಿ ಗ್ರಾ.ಪಂ ಸದಸ್ಯ ಸಂತೋಷ್ ಕುಮಾರ್ ಜೈನ್, ರಾಮ ಪೊಯ್ಯೆಗುಡ್ಡೆ, ಪ್ರವೀಣ್ ಭಂಡಾರಿ, ಹರೀಶ್ ಗರ್ಡಾಡಿ, ಅಹಮ್ಮದ್ ಬಾವ, ಮೊದಲಾದರ ಸೂಕ್ತ ಸಹಕಾರದಿಂದ ಗುರುವಾಯನಕೆರೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಆಸ್ಪತ್ರೆಗೆ ಸಾಗಿಸಿದ್ದು ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!