- Advertisement -
- Advertisement -
ಚೆನ್ನೈ: ದೇಶದಲ್ಲೆ ಹೆಸರಾಂತ ಕಣ್ಣಿನ ಆಸ್ಪತ್ರೆ ‘ವಾಸನ್ ಐ ಕೇರ್’ ಸಂಸ್ಥಾಪಕ ಎ.ಎಂ.ಅರುಣ್ ಸೋಮವಾರ ಮೃತಪಟ್ಟಿದ್ದಾರೆ. ಮೇಲ್ನೋಟಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಅವರ ಸಂಬಂಧಿಕರು ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರಿದ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಅರುಣ್ ತಿರುಚ್ಚಿಯಿಂದ ತಮ್ಮ ವೃತ್ತಿಜೀವನ ಆರಂಭಿಸಿ ತಮ್ಮ ಸಂಸ್ಥೆಯ ಮೂಲಕ ಚಿರಪರಿಚಿತ ರಾಗಿದ್ದರು. ಇವರಿಗೆ 51 ವರ್ಷ ವಯಸ್ಸಾಗಿತ್ತು.ವೈದ್ಯರು ಹೇಳುವ ಪ್ರಕಾರ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ತೇನಾಂಪೇಟೆಯಲ್ಲಿರುವ ಕಾವೇರಿ ಆಸ್ಪತ್ರೆಗೆ ಅರುಣ್ ಅವರನ್ನು ಕರೆ ತರಲಾಗಿತ್ತು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ತನಿಖೆಯ ನಂತರ ಸತ್ಯ ಹೊರಬರಬೇಕಿದೆ.
- Advertisement -