Monday, June 8, 2026
Homeತಾಜಾ ಸುದ್ದಿಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ- ಮೃತದೇಹದಿಂದ ಶ್ವಾಸಕೋಶ ಕೊಂಡೊಯ್ದ ಪಾಪಿಗಳು!..

ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ- ಮೃತದೇಹದಿಂದ ಶ್ವಾಸಕೋಶ ಕೊಂಡೊಯ್ದ ಪಾಪಿಗಳು!..

- Advertisement -
- Advertisement -

ಲಖನೌ:ಇಲ್ಲಿನ ಘಟಾಂಪುರ ಪ್ರದೇಶದಲ್ಲಿ 6 ವರ್ಷದ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಅಪರಾಧಿಗಳು ಬಾಲಕಿಯನ್ನು ಹತ್ಯೆಗೈದು ನಂತರ ಆಕೆಯ ಮೃತದೇಹದಿಂದ ಶ್ವಾಸಕೋಶವನ್ನು ಕೊಂಡೊಯ್ದಿರುವ ಭಯಾನಕ ಘಟನೆ ವರದಿಯಾಗಿದೆ. ದೀಪಾವಳಿ ಹಬ್ಬದ ದಿನ ರಾತ್ರಿ ಬಾಲಕಿ ನಾಪತ್ತೆಯಾಗಿದ್ದಳು. ಬಳಿಕ ಅರಣ್ಯ ಪ್ರದೇಶದಲ್ಲಿ ಬಾಲಕಿ ಶವ ಪತ್ತೆಯಾಗಿತ್ತು.

ಈ ಪ್ರಕರಣದಲ್ಲಿ ಅಂಕುಲ್ ಕುರಿಲ್ ಮತ್ತು ಬೀರನ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅವರು ನೀಡಿರುವ ಮಾಹಿತಿ ಪ್ರಕಾರ ಪರಶುರಾಮ್ ಎಂಬಾತ ಮಾಟ ಮಂತ್ರ ಮಾಡುವ ಉದ್ದೇಶಕ್ಕೆ ಬಾಲಕಿಯೊಬ್ಬಳ ಶ್ವಾಸಕೋಶ ಬೇಕೆಂದು ಹಣ ನೀಡಿದ ಕಾರಣ ಹತ್ಯೆ ನಡೆಸಿದ್ದಾರೆಂದು ಒಪ್ಪಿಕೊಂಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!