Friday, March 29, 2024
Homeಕರಾವಳಿಮಂಗಳೂರು: ನಾಗನಕಲ್ಲು ದ್ವಂಸಗೊಳಿಸಿದ ಆರೋಪಿಗಳನ್ನು ಬಂಧಿಸಿದ ಪೊಲೀಸರನ್ನು ಅಭಿನಂದಿಸಿದ ವಜ್ರದೇಹಿ ಸ್ವಾಮೀಜಿ

ಮಂಗಳೂರು: ನಾಗನಕಲ್ಲು ದ್ವಂಸಗೊಳಿಸಿದ ಆರೋಪಿಗಳನ್ನು ಬಂಧಿಸಿದ ಪೊಲೀಸರನ್ನು ಅಭಿನಂದಿಸಿದ ವಜ್ರದೇಹಿ ಸ್ವಾಮೀಜಿ

spot_img
- Advertisement -
- Advertisement -

ಮಂಗಳೂರು: ನಾಗನಕಲ್ಲು ದ್ವಂಸ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಹಾಗೂ ಕಮಿಷನರ್ ಎನ್. ಶಶಿಕುಮಾರ್ ಅವರನ್ನು ವಜ್ರದೇಹಿ ಸ್ವಾಮೀಜಿ ಅಭಿನಂದಿಸಿದ್ದಾರೆ.

ಆರೋಪಿಗಳನ್ನು ಬಂಧಿಸಿದರೆ ಚಿನ್ನದ ಪದಕ ನೀಡುತ್ತೇವೆ ಎಂದು ನಾಗನಕಲ್ಲು ದ್ವಂಸ ಪ್ರಕರಣವನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಸ್ವಾಮೀಜಿ ಹೇಳಿಕೆ ನೀಡಿದ್ದರು.

ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಡುಕೋಡಿ ಗ್ರಾಮದ ಬಂಗ್ರ ಕೂಳೂರು ಕೋಟ್ಯಾನ್‌ ಕುಟುಂಬದ ನಾಗಬನ ಅಕ್ಟೋಬರ್ 21ರಂದು ಒಂದು ಕಲ್ಲನ್ನು ಧ್ವಂಸಗೊಳಿಸಿ ಉಳಿದ 5 ಕಲ್ಲುಗಳನ್ನುಅಪವಿತ್ರಗೊಳಿಸಿದ್ದರು. ಇದಾದ ಬಳಿಕ ನವೆಂಬರ್ 12 ರಂದು ಮಂಗಳೂರು ನಗರದ ಉರ್ವ ಪೊಲೀಸ್‌ ಠಾಣಾ ವ್ಯಾಪ್ತಿಯ ಕೋಡಿಕಲ್‌ ನಾಗಬನದ ಮೂರ್ತಿಗಳನ್ನು ಕಿತ್ತೆಸೆದು ಹಾನಿಗೊಳಿಸಿ ಅಪವಿತ್ರಗೊಳಿಸಿದ್ದರು.

ಇನ್ನು ನಾಗನ ಕಲ್ಲುಗಳನ್ನು ಭಗ್ನಗೊಳಿಸಿ, ಅಪವಿತ್ರಗೊಳಿಸಿ ಕೋಮು ಸೌಹಾರ್ದತೆ ಕದಡಲು ಸಂಚು ಹೂಡಿರುವ 8 ಜನ ಆರೋಪಿಗಳನ್ನು ಬಂಧಿಸಲಾಗಿದೆ.

- Advertisement -
spot_img

Latest News

error: Content is protected !!