Wednesday, June 24, 2026
Homeತಾಜಾ ಸುದ್ದಿಸೋಷಿಯಲ್ ಮೀಡಿಯಾದಲ್ಲಿ ನಟಿ ವೈಷ್ಣವಿ ಗೌಡ ಎಂಗೇಜ್ ಮೆಂಟ್ ಫೋಟೋ ವೈರಲ್; ಸ್ಪಷ್ಟನೆ ನೀಡಿದ ನಟಿ

ಸೋಷಿಯಲ್ ಮೀಡಿಯಾದಲ್ಲಿ ನಟಿ ವೈಷ್ಣವಿ ಗೌಡ ಎಂಗೇಜ್ ಮೆಂಟ್ ಫೋಟೋ ವೈರಲ್; ಸ್ಪಷ್ಟನೆ ನೀಡಿದ ನಟಿ

- Advertisement -
- Advertisement -

ಬೆಂಗಳೂರು; ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ವೈಷ್ಣವಿ ಗೌಡ ಅವರಿಗೆ ನಿಶ್ಚಿತಾರ್ಥವಾಗಿದೆ ಎನ್ನಲಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ‌.  ಈ ಬಗ್ಗೆ ಸ್ವತಃ ವೈಷ್ಣವಿ ಅವರೇ ಸ್ಪಷ್ಟನೆ ನೀಡಿದ್ದಾರೆ.

ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಹುಡುಗನ ಕಡೆಯವರು ಬಂದು ನೋಡಿ, ಮಾತುಕತೆ ಮಾಡಿರೋದು ನಿಜ. ಆದರೆ, ಇದು ಎಂಗೇಜ್ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ. ಮನೆಯವರು ನಿರ್ಧರಿಸಿರೋದರಿಂದ ಹುಡುಗ ಕೂಡ ನನಗೆ ಹೊಸ ವ್ಯಕ್ತಿ.

ಹೀಗಾಗಿ ನನಗೂ ಆಲೋಚಿಸಲು ಕೊಂಚ ಸಮಯ ಬೇಕಾಗಿದೆ. ನಾನಿನ್ನೂ ಈ ಮದುವೆಗೆ ಒಪ್ಪಿಗೆ ಸೂಚಿಸಿಲ್ಲ ಎಂದು ತಿಳಿಸಿದ್ದಾರೆ.

ವೈಷ್ಣವಿ ಗೌಡ ಅವರ ಕುಟುಂಬ ಒಪ್ಪಿರುವ ಹುಡುಗನ ಹೆಸರು ವಿದ್ಯಾಭರಣ ಆಗಿದ್ದು, ಬೆಂಗಳೂರು ಮೂಲದ ಬ್ಯುಸಿನೆಸ್ಮ್ಯಾನ್ ಆಗಿದ್ದಾರೆ. ವಿದ್ಯಾಭರಣ ಅವರು, 2018ರಲ್ಲಿ `ವಿರಾಜ್’ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದಾರೆಂದು ತಿಳಿದುಬಂದಿದೆ.

- Advertisement -

Latest News

error: Content is protected !!