- Advertisement -
![]()
- Advertisement -
ಚಿಕ್ಕೋಡಿ: ಪಿಎಫ್‌ಐ ನಿಷೇಧದ ವಿಚಾರವಾಗಿ ಯು.ಟಿ.ಖಾದರ್ ಎಲ್ಲಾ ಸಂಘಟನೆಗಳು ಬ್ಯಾನ್ ಆಗ್ಬೇಕು ಅಂತ ಹೇಳಿಕೆ ಕೊಟ್ಟಿದ್ರು. ಇವರ ಹೇಳಿಕೆಗೆ ತಿರುಗೇಟು ಕೊಟ್ಟ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್, ಖಾದರ್ ಅವರೇ ನಮ್ಮ ಬಳಿ ಬಂದು ಎಸ್‌ಡಿಪಿಐ, ಪಿಎಫ್‌ಐ ಬ್ಯಾನ್ ಮಾಡುವಂತೆ ಕಣ್ಣೀರು ಹಾಕಿದ್ರು. ಅದಕ್ಕೆ ನನ್ನ ಬಳಿ ಸಾಕ್ಷಿ ಇದೆ ಎಂದಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್‍ಡಿಪಿಐ ಹಾಗೂ ಪಿಎಫ್‍ಐ ಕಾರ್ಯಕರ್ತರು ಯು.ಟಿ ಖಾದರ್ ಅವರನ್ನೇ ಹತ್ಯೆ ಮಾಡಲು ಮುಂದಾಗಿದ್ದರು. ಧಾರ್ಮಿಕ ಸಂಘಟನೆಯ ಹೆಸರಲ್ಲಿ ನಾವು ಯಾರನ್ನೂ ವಿರೋಧ ಮಾಡಿಲ್ಲ. ಕಳೆದ 8 ವರ್ಷಗಳ ಅಧ್ಯಯನದ ನಂತರ ಈ ಕ್ರಮ ಕೈಗೊಂಡಿದ್ದೇವೆ ಎಂದಿದ್ದಾರೆ.
- Advertisement -


