Thursday, June 4, 2026
Homeಕರಾವಳಿಶೃಂಗೇರಿ ಸ್ವಾಮೀಜಿ ಭೇಟಿ ಮಾಡಿ ಆಶೀರ್ವಾದ ಪಡೆದ ಯು.ಟಿ‌. ಖಾದರ್

ಶೃಂಗೇರಿ ಸ್ವಾಮೀಜಿ ಭೇಟಿ ಮಾಡಿ ಆಶೀರ್ವಾದ ಪಡೆದ ಯು.ಟಿ‌. ಖಾದರ್

- Advertisement -
- Advertisement -

ಬೆಂಗಳೂರು: ವಿಧಾನಸಭೆ ವಿಪಕ್ಷ ಉಪನಾಯಕ ಮತ್ತು ಮಂಗಳೂರು ಶಾಸಕ ಯು.ಟಿ. ಖಾದರ್ ಶೃಂಗೇರಿ ಮಠದ ಸ್ವಾಮೀಜಿ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

ಬೆಂಗಳೂರಿನಲ್ಲಿ ಇಂದು ಶೃಂಗೇರಿ ಮಠದ ಕಿರಿಯ ಶ್ರೀ ವಿಧುಶೇಖರ ಭಾರತಿ ತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಖಾದರ್ ಆಶೀರ್ವಾದ ಪಡೆದಿದ್ದಾರೆ.

ಸ್ವಾಮೀಜಿಗೆ ಫಲಪುಷ್ಪ ಸಮರ್ಪಿಸಿ ಅಶೀರ್ವಾದ ಪಡೆದ ಖಾದರ್, ಶ್ರೀಗಳ ಜೊತೆ ಕೆಲವು ಹೊತ್ತು ಮಾತುಕತೆ ನಡೆಸಿದ್ದಾರೆ.

ಬೆಂಗಳೂರಿನ ಶಂಕರಪುರಂನಲ್ಲಿರುವ ಶೃಂಗೇರಿ ಮಠಕ್ಕೆ ತೆರಳಿ ಖಾದರ್ ಶ್ರೀಗಳನ್ನು ಭೇಟಿ ಮಾಡಿದ್ದಾರೆ.

- Advertisement -

Latest News

error: Content is protected !!