Friday, March 29, 2024
HomeUncategorizedಮೂತ್ರದ ಬಣ್ಣ ಹೇಳುತ್ತದೆ ನಿಮ್ಮ ಆರೋಗ್ಯದ ಗುಟ್ಟು

ಮೂತ್ರದ ಬಣ್ಣ ಹೇಳುತ್ತದೆ ನಿಮ್ಮ ಆರೋಗ್ಯದ ಗುಟ್ಟು

spot_img
- Advertisement -
- Advertisement -

ನಮ್ಮ ದೇಹದ ಆರೋಗ್ಯದ ಬಗ್ಗೆ ಸಾಕಷ್ಟು ಮಾಹಿತಿಯನ್ನು ತಿಳಿಸುತ್ತದೆ ಮೂತ್ರದ ಬಣ್ಣ. ನಮ್ಮ ದೇಹದಲ್ಲಿ ನಾವು ತಿಂದಂತಹ ಆಹಾರ ಮತ್ತು ಕೂಡಿದಂತಹ ನೀರು ಈ ಎಲ್ಲವೂ ಕೂಡ ನಮ್ಮ ದೇಹಕ್ಕೆ ಪೌಷ್ಟಿಕಾಂಶವನ್ನು ನೀಡುತ್ತದೆ. ನಾವು ತಿಂದಂತಹ ಆಹಾರ ಮತ್ತು ನೀರು ಜೀರ್ಣವಾದ ನಂತರ ಬೇಡದೆ ಇರುವಂತಹ ಟಾಕ್ಸಿಕ್ ಅಂಶವೂ ಮತ್ತು ಬೇಡದೆ ಇರುವಂತಹ ಪದಾರ್ಥಗಳು ಮೂತ್ರದ ಮುಖಾಂತರ ಇನ್ನು ಕೆಲವೊಂದು ಕಾರ್ಯದ ಮುಖಾಂತರ ನಮ್ಮ ದೇಹ ಅದನ್ನು ಹೊರ ಹಾಕುತ್ತದೆ.
ಹಾಗಾದರೆ ಮೂತ್ರದ ಬಣ್ಣವು ವ್ಯಕ್ತಿಯ ಆರೋಗ್ಯದ ಪರಿಸ್ಥಿತಿಯನ್ನು ಹೇಗೆ ತಿಳಿಸುತ್ತದೆ ಅಂದರೆ ಮೂತ್ರವು ತೆಳು ಹಳದಿ ಬಣ್ಣದಲ್ಲಿ ಯಾವುದೇ ರೀತಿಯ ದುರ್ವಾಸನೆ ಇಲ್ಲದೇ ಇದ್ದರೆ ಅದು ಆರೋಗ್ಯವಲ್ಲ ವ್ಯಕ್ತಿಯ ಮೂತ್ರದ ಲಕ್ಷಣ ಎಂದು ಹೇಳಲಾಗುವುದು ಮತ್ತು ಈ ಒಬ್ಬ ವ್ಯಕ್ತಿ ತನ್ನ ದೇಹಕ್ಕೆ ಬೇಕಾಗಿರುವಷ್ಟು ನೀರನ್ನು ಕುಡಿಯುತ್ತಿದ್ದಾರೆ ಎಂದು ಕೂಡ ಈ ಒಂದು ಮೂತ್ರದ ಬಣ್ಣ ತಿಳಿಸಿ ಹೇಳುತ್ತದೆ

ಮೂತ್ರದ ಬಣ್ಣವು ಕಡು ಹಳದಿ ಬಣ್ಣದಲ್ಲಿ ಇದ್ದರೆ ನಮ್ಮ ಆರೋಗ್ಯದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇಲ್ಲ ಎನ್ನುವುದು ಇದು ತಿಳಿಸಿ ಹೇಳುತ್ತದೆ ಆದರೆ ನಮ್ಮ ದೇಹಕ್ಕೆ ಬೇಕಾಗುವಷ್ಟು ನೀರನ್ನು ನಾವು ಕುಡಿಯುತ್ತಿಲ್ಲ ಅನ್ನುವುದನ್ನು ಇದು ತಿಳಿಸುತ್ತದೆ ಆದ್ದರಿಂದಲೇ ಈ ಒಂದು ಮೂತ್ರ ಕಡು ಹಳದಿ ಬಣ್ಣದಲ್ಲಿ ಎದ್ದು ದುರ್ವಾಸನೆ ಬರುತ್ತಿರುತ್ತದೆ .

ಮಾನವನ ದೇಹಕ್ಕೆ ದಿನಕ್ಕೆ ಎಂಟು ಲೀಟರ್ ನಷ್ಟು ನೀರು ಅತ್ಯಗತ್ಯವಾಗಿರುತ್ತದೆ ಈ ರೀತಿ ಕುಡಿಯದೆ ಇದ್ದರೆ ದೇಹದಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಬಹುದು ಆದ್ದರಿಂದ ಎಂಟು ಲೀಟರ್ ಅಷ್ಟು ನೀರನ್ನು ಕುಡಿಯುವುದು ಉತ್ತಮ ಆರೋಗ್ಯಕ್ಕೆ ಒಳ್ಳೆಯದು. ಇನ್ನು ಮೂತ್ರ ಕಿತ್ತಳೆ ಹಣ್ಣಿನ ಸಿಪ್ಪೆಯ ಬಣ್ಣದಲ್ಲಿ ಇದ್ದರೆ ಕ್ಯಾರೆಟ್ ಮತ್ತು ವಿಟಮಿನ್ ಸಿ ಹೆಚ್ಚು ಇರುವಂತಹ ಆಹಾರವನ್ನು ಸೇವನೆ ಮಾಡಿದಾಗ ಈ ಬಣ್ಣದ ಮೂತ್ರ ಬರುತ್ತದೆ ಮತ್ತು ಕಿಡ್ನಿ ಸಮಸ್ಯೆ ಕಿಡ್ನಿಯಲ್ಲಿ ಸ್ಟೋನ್ ಆಗಿರುವ ಸಮಸ್ಯೆ ಇದ್ದರೆ ಮತ್ತು ಕಿಮೋತೆರಪಿ ಮಾಡುತ್ತಿರುವಂತಹ ವ್ಯಕ್ತಿಯ ಮೂತ್ರದ ಬಣ್ಣ ಕೂಡ ಕಿತ್ತಳೆ ಬಣ್ಣದ ರೂಪದಲ್ಲಿ ಇರುತ್ತದೆ .

ಮೂತ್ರವು ಕೆಂಪು ಬಣ್ಣದಲ್ಲಿ ಬರುತ್ತಿದ್ದರೆ ಕೆಲವೊಂದು ಬಾರಿ ವ್ಯಕ್ತಿಯು ಮನೆ ಮದ್ದನ್ನು ತೆಗೆದುಕೊಂಡಾಗ ಈ ರೀತಿಯ ಬಣ್ಣದ ಮೂತ್ರ ಬರುತ್ತದೆ ಇನ್ನು ಬೀಟ್ರೂಟ್ ನಂತಹ ಆಹಾರವನ್ನು ಸೇವಿಸಿದಾಗಲೂ ಕೂಡ ಈ ರೀತಿಯ ಬಣ್ಣದ ಮೂತ್ರ ಬರುವುದು ಇದು ಒಂದು ದಿನ ಮಾತ್ರ ಇರುತ್ತದೆ ಆ ನಂತರ ಈ ಬಣ್ಣವು ಹೋಗಿಬಿಡುತ್ತದೆ. ಮೂತ್ರದಲ್ಲಿ ರಕ್ತ ಕಾಣಿಸಿಕೊಂಡರೆ ಅದು ಮುಟ್ಟಿನ ಸೂಚನೆಯನ್ನು ಹೇಳುತ್ತದೆ ಎನ್ನುವ ಕಿಡ್ನಿಯಲ್ಲಿ ಗಡ್ಡೆ ಕಂಡುಬಂದರೆ ಈ ರೀತಿಯ ಸಮಸ್ಯೆಗಳು ಇದ್ದರೆ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುತ್ತದೆ ಹೀಗೆ ಬಂದಾಗ ವೈದ್ಯರ ಬಳಿ ಹೋಗಿ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ .
ಮೂತ್ರವು ಕಂದು ಬಣ್ಣದಲ್ಲಿ ಬರುತ್ತಿದ್ದರೆ ಅದು ಏನನ್ನು ತಿಳಿಸುತ್ತದೆ ಅಂದರೆ ಕೆಲವೊಂದು ಚಿಕಿತ್ಸೆ ತೆಗೆದುಕೊಳ್ಳುತ್ತಿರುವಾಗ ಮತ್ತು ಮಲೇರಿಯಾಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿರುವಾಗ ಆಂಟಿ ಬ್ಯಾಕ್ಟೀರಿಯಲ್ ಮಾತ್ರೆಗಳು ಹೆಚ್ಚಾಗಿ ಸೇವನೆ ಮಾಡುವ ಕಾರಣದಿಂದಾಗಿ ಮೂತ್ರ ಈ ಬಣ್ಣದಲ್ಲಿ ಬರುತ್ತದೆ. ವ್ಯಾಯಾಮ ಮಾಡಿದಾಗ ದೇಹದಲ್ಲಿ ಇರುವಂತಹ ಸ್ನಾಯುಗಳಿಗೆ ಪೆಟ್ಟಾದರೆ ಈ ರೀತಿ ಮೂತ್ರವು ಕಂದು ಬಣ್ಣದಲ್ಲಿ ಬರುತ್ತದೆ ಮತ್ತು ಹೆಪಟೈಟಿಸ್ ಬಿ ಲಿವರ್ ಪ್ರಾಬ್ಲಂ ಇನ್ನೂ ಹಲವಾರು ರೀತಿಯ ಸಮಸ್ಯೆಗಳು ದೇಹದಲ್ಲಿ ಇದ್ದಾಗ ಮೂತ್ರವು ಕಂದು ಬಣ್ಣದಲ್ಲಿ ಇರುತ್ತದೆ ಎಂದು ಹೇಳಲಾಗುವುದು ಈ ರೀತಿ ಬಂದಾಗ ತಕ್ಷಣವೇ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದು ತುಂಬಾನೇ ಉತ್ತಮ .
ಮೂತ್ರವು ನಿಯೋನ್ ಬಣ್ಣದಲ್ಲಿ ಇದ್ದರೆ ಅದು ದೇಹದಲ್ಲಿ ಸಾಕಷ್ಟು ನೀರು ಇಲ್ಲದೇ ಇರುವುದನ್ನು ಸೂಚಿಸುತ್ತದೆ ಮತ್ತು ಧೂಮಪಾನವನ್ನು ಮದ್ಯಪಾನವನ್ನು ಸೇವಿಸುವುದರಿಂದ ಕೂಡ ಮೂತ್ರವು ಈ ರೀತಿ ಬಣ್ಣದಲ್ಲಿ ಬರುತ್ತದೆ. ಮೂತ್ರವು ಹಸಿರು ಬಣ್ಣದಲ್ಲಿ ಇದ್ದಲ್ಲಿ ಅದು ಶಾಖಾಹಾರಿ ಪದಾರ್ಥಗಳನ್ನು ತಿಂದಾಗ ಈ ರೀತಿ ಬರುತ್ತದೆ ಮತ್ತು ರಕ್ತದೊತ್ತಡ ಸಮಸ್ಯೆಗೆ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಿದ್ದರೆ ಈ ರೀತಿ ಬಣ್ಣದ ಮೂತ್ರ ಬರುತ್ತದೆ ಎಂದು ಹೇಳಲಾಗುತ್ತದೆ . ಮೂತ್ರದಲ್ಲಿ ರಕ್ತ ಕಂಡು ಬಂದರೆ ಇದು ದೇಹದಲ್ಲಿ ಯಾವುದೋ ಒಂದು ದೊಡ್ಡ ಸಮಸ್ಯೆಯಾಗಿದೆ ಎಂಬುದನ್ನು ತಿಳಿಸುತ್ತದೆ ಆದ್ದರಿಂದ ತಕ್ಷಣವೇ ವೈದ್ಯರನ್ನು ಭೇಟಿ ನೀಡುವುದು ಒಳ್ಳೆಯದು ಮತ್ತು ಮೂತ್ರವು ನೇರಳೆ ಬಣ್ಣದಲ್ಲಿ ಇದ್ದರೆ ಅದು ಅನುಮತಿ ಕಾಯಿಲೆಯಾದ ಒರೋಪಿಯ ಎಂಬ ಕಾಯಿಲೆಯನ್ನು ಸೂಚಿಸುತ್ತದೆಯಂತೆ .

ಮೂತ್ರವು ಬಣ್ಣ ರಹಿತ ವಿದ್ದರೆ ಅದು ನಾವು ಹೆಚ್ಚು ನೀರನ್ನು ಸೇವಿಸುತ್ತಿದ್ದೇವೆ ಎಂಬುದನ್ನು ಸೂಚಿಸುತ್ತದೆ ಆದರೆ ನಮ್ಮ ದೇಹಕ್ಕೆ ಎಷ್ಟು ಬೇಕೋ ಅಷ್ಟು ನೀರನ್ನು ಮಾತ್ರ ಸೇವಿಸಬೇಕು ಇಲ್ಲವಾದಲ್ಲಿ ಹೆಚ್ಚು ನೀರು ಕುಡಿಯುವುದರಿಂದ ಕೂಡ ಸಮಸ್ಯೆಯೂ ಬರಬಹುದು .

- Advertisement -
spot_img

Latest News

error: Content is protected !!