Saturday, June 6, 2026
Homeಕರಾವಳಿಉಪ್ಪಿನಂಗಡಿ: ಇಲಿ ಪಾಷಾಣ ತಿಂದು ಮಗು ದಾರುಣ ಸಾವು

ಉಪ್ಪಿನಂಗಡಿ: ಇಲಿ ಪಾಷಾಣ ತಿಂದು ಮಗು ದಾರುಣ ಸಾವು

- Advertisement -
- Advertisement -

ಮಂಗಳೂರು: ಇಲಿ ಪಾಷಾಣ ತಿಂದು ಮಗು ಸಾವನ್ನಪ್ಪಿರುವ ದಾರುಣ ಘಟನೆ ಉಪ್ಪಿನಂಗಡಿಯ ಬಜತ್ತೂರು ಗ್ರಾಮದ ಕೆಮ್ಮಾರ ಎಂಬಲ್ಲಿ ನಡೆದಿದೆ.

ಕೆಮ್ಮಾರದ ನಿವಾಸಿಗಳಾದ ನಿವೃತ್ತ ಸೈನಿಕ ಸೈಜು ಹಾಗೂ ದೀಪ್ತಿ ದಂಪತಿ ಪುತ್ರಿ ಶ್ರೇಯಾ(2.5) ಮೃತಪಟ್ಟ ಮಗು.

ಮೃತ ಶ್ರೇಯಾ ಇಂದು ಆಟವಾಡುತ್ತಾ, ತಿಳಿಯದೇ ಇಲಿಪಾಷಾಣಾ ತಿಂದಿದ್ದಾಳೆ. ಈ ವಿಚಾರ ಪೋಷಕರಿಗೆ ತಿಳಿಯುತ್ತಿದ್ದಂತೆ ಕೂಡಲೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ.

ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!