Sunday, May 5, 2024
Homeಕರಾವಳಿಮಂಗಳೂರು: ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಬಿಜೆಪಿ ನಾಯಕನ ಪುತ್ರಿಯ ಅದ್ಧೂರಿ ಮದುವೆ, ಪ್ರಕರಣ ದಾಖಲು

ಮಂಗಳೂರು: ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಬಿಜೆಪಿ ನಾಯಕನ ಪುತ್ರಿಯ ಅದ್ಧೂರಿ ಮದುವೆ, ಪ್ರಕರಣ ದಾಖಲು

spot_img
- Advertisement -
- Advertisement -

ಮಂಗಳೂರು: ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮಂಗಳೂರಿನ ಮಂಗಳಾದೇವಿ ದೇವಾಲಯದ ಸಭಾಂಗಣದಲ್ಲಿ ಅದ್ಧೂರಿ ವಿವಾಹ ನಡೆದಿದೆ. ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ಆಯೋಜಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ವೇದಿಕೆಯಲ್ಲಿ ಬಿಜೆಪಿಯ ನಾಮನಿರ್ದೇಶಿತ ಕಾರ್ಪೊರೇಟರ್ ಎಕ್ಕೂರು ಭಾಸ್ಕರ ಚಂದ್ರಶೆಟ್ಟಿ ಅವರ ಪುತ್ರಿಯ ಮದುವೆ ಸೇರಿದಂತೆ ಇನ್ನೂ ಮೂರು ವಿವಾಹಗಳು ನಡೆಯುತ್ತಿದ್ದವೆನ್ನಲಾಗಿದೆ. ಮದುವೆ ನೂರಕ್ಕೂ ಹೆಚ್ಚು ಜನರ ಗುಂಪುಗೂಡಿದ್ದರು ಎಂದು ತಿಳಿದುಬಂದಿದೆ. ದೇವಾಲಯದ ಹೊರಗೆ 40ಕ್ಕೂ ಹೆಚ್ಚು ಕಾರುಗಳು ಇದ್ದ ಹಿನ್ನಲೆಯಲ್ಲಿ ಟ್ರಾಫಿಕ್ ಜಾಮ್ ಕೂಡಾ ಉಂಟಾಗಿತ್ತು.

ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಮದುವೆ ಕಾರ್ಯಕ್ರಮ ನಿಲ್ಲಿಸಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಮಾತ್ರ ಮದುವೆ ನಡೆಸಲು ಅವಕಾಶ ಇದೆ. ಆದ್ದರಿಂದ ದೇವಾಲಯದಲ್ಲಿ ಮದುವೆ ಆಯೋಜಿಸಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಅನುಮತಿ ಕೊಟ್ಟವರು ಯಾರು?:
ದೇವಾಲಯದಲ್ಲಿ ನಡೆಯಬೇಕಿದ್ದ ಮದುವೆಯನ್ನು ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಮದನ್ ಮೋಹನ್ ನಿಲ್ಲಿಸಿದ್ದಾರೆ. ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ರಮಾನಾಥ ಹೆಗಡೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಒಂದೇ ಮುಹೂರ್ತದಲ್ಲಿ ಮದುವೆ ಅಂತಾ ಸಮಜಾಯಿಷಿ ನೀಡಿದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಅರ್ಧ ಗಂಟೆಯಲ್ಲಿ 4 ಮದುವೆಯನ್ನು ಹೇಗೆ ಮಾಡುತ್ತಿರಾ?, ಅಧಿಕಾರಿಗಳ ಕಿವಿ ಮೇಲೆ ಹೂ ಇಡಲು ಬರಬೇಡಿ. ಈ ಮದುವೆಗೆ ನಿಮಗೆ ಅನುಮತಿ ಕೊಟ್ಟವರು ಯಾರು? ಎಂದು ಮದನ್ ಮೋಹನ್ ಪ್ರಶ್ನಿಸಿದದ್ದಾರೆ.

ಮದುವೆಗೆ ಸಂಬಂಧಪಟ್ಟವರ ಮೇಲೆ ದೂರು ದಾಖಲಿಸಿ, ಅನುಮತಿ ಇರುವ ಕಾರುಗಳನ್ನು ಬಿಟ್ಟು ಉಳಿದ ಎಲ್ಲಾ ವಾಹನಗಳನ್ನು ವಶಕ್ಕೆ ಪಡೆದು, ಆಡಳಿತ ಮಂಡಳಿ ಮತ್ತು ಆಯೋಜಕ ವಿರುದ್ಧ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಿದರು. ದಾಳಿ ಸಂದರ್ಭ ಮನಪಾ ಉಪ ಆಯುಕ್ತರಾದ ಬಿನೊಯ್, ಧಾರ್ಮಿಕ ದತ್ತಿ ಇಲಾಖೆಯ ಸಣ್ಣ ರಂಗಯ್ಯ, ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!