Saturday, June 13, 2026
Homeಕರಾವಳಿಸುಳ್ಯದ ಅರಂತೋಡಿನ ವ್ಯಕ್ತಿ ನ್ಯೂಝಿಲೆಂಡ್ ನಲ್ಲಿ ನಿಧನ

ಸುಳ್ಯದ ಅರಂತೋಡಿನ ವ್ಯಕ್ತಿ ನ್ಯೂಝಿಲೆಂಡ್ ನಲ್ಲಿ ನಿಧನ

- Advertisement -
- Advertisement -

ಸುಳ್ಯ : ಇಲ್ಲಿನ ಅರಂತೋಡು ಮೇರ್ಕಜೆಯ ಜಯಪ್ರಕಾಶ್ (45) ರವರು ತೀವ್ರ ಅಸೌಖ್ಯದಿಂದ ಶುಕ್ರವಾರ ರಾತ್ರಿ ನ್ಯೂಝಿಲೆಂಡ್ ನಲ್ಲಿ ನಿಧನರಾಗಿದ್ದಾರೆ.

ಜಯಪ್ರಕಾಶ್ ಅವರಿಗೆ ಬ್ರೈನ್ ಟ್ಯೂಮರ್ ಆಗಿತ್ತು. ಅದಕ್ಕಾಗಿ ಆಪರೇಶನ್ ಮಾಡಲು ಸಿದ್ಧತೆ ನಡೆಸಿದಾಗ ಅವರ ಅಸೌಖ್ಯ ತೀವ್ರಗೊಂಡು ಕೋಮಕ್ಕೆ ಜಾರಿದ್ದರೆನ್ನಲಾಗಿದೆ. ನಿನ್ನೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ.

ಜಯಪ್ರಕಾಶರ ಪತ್ನಿ ಪುಷ್ಪಾ ನ್ಯೂಝಿಲೆಂಡ್ ನಲ್ಲಿದ್ದು, ಐದು ವಾರದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಹಿರಿಯ ಪುತ್ರಿಗೆ 6 ವರ್ಷವಾಗಿದೆ.

ಜಯಪ್ರಕಾಶ್ ಅವರು ದುಬೈ, ಆಸ್ಟ್ರೇಲಿಯಾ, ಸಿಂಗಾಪುರ ಮೊದಲಾದೆಡೆ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಎರಡು ವರ್ಷ ಹಿಂದೆ ನ್ಯೂಝಿಲೆಂಡ್ ಗೆ ಹೋಗಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳು, ತಂದೆ, ತಾಯಿ ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.

- Advertisement -

Latest News

error: Content is protected !!