Thursday, June 4, 2026
Homeಕರಾವಳಿಉಪ್ಪಿನಂಗಡಿ: ಎಸ್‌ಡಿಪಿಐ ವಲಯ ಸಮಿತಿ ಅಧೀನದಲ್ಲಿ ಪಕ್ಷದ ಸಿದ್ದಾಂತವನ್ನು ಒಪ್ಪಿಕೊಂಡು ಹಲವಾರು ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆ

ಉಪ್ಪಿನಂಗಡಿ: ಎಸ್‌ಡಿಪಿಐ ವಲಯ ಸಮಿತಿ ಅಧೀನದಲ್ಲಿ ಪಕ್ಷದ ಸಿದ್ದಾಂತವನ್ನು ಒಪ್ಪಿಕೊಂಡು ಹಲವಾರು ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆ

- Advertisement -
- Advertisement -

ಉಪ್ಪಿನಂಗಡಿ. ಸೆ 1:- ಎಸ್‌ಡಿಪಿಐ ಉಪ್ಪಿನಂಗಡಿ ವಲಯ ಸಮಿತಿಯ ಅದರ್ಶ ನಗರ ಬ್ರಾಂಚ್ ವತಿಯಿಂದ ಎಸ್‌ಡಿಪಿಐ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಎಸ್‌ಡಿಪಿಐ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿಕೊಂಡು ಹಲವಾರು ಕಾರ್ಯಕರ್ತರು ಪಕ್ಷದ ಧ್ವಜವು ಸ್ವೀಕರಿಸುವ ಮೂಲಕ ಪಕ್ಷಕ್ಕೆ ಸೇರ್ಪಡೆಗೊಂಡರು.

ಕಾರ್ಯಕ್ರಮದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಪ್ಪಿನಂಗಡಿ ವಲಯ ಸಮಿತಿ ಅಧ್ಯಕ್ಷರಾದ ಮುಸ್ತಾಫ ಲತೀಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ್ಪಿನಂಗಡಿ ವಲಯ ನಿಕಟ ಪೂರ್ವ ಅಧ್ಯಕ್ಷರಾದ ಸೀಮಾ ಅಬ್ದುಲ್ ರಝಾಕ್ ಪಕ್ಷದ ಅನಿವಾರ್ಯತೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಎಸ್‌ಡಿಪಿಐ ಪುತ್ತೂರು ತಾಲೂಕು ಕೋಶಾಧಿಕಾರಿ ಇಕ್ಬಾಲ್ ಕೆಂಪಿ ಯವರು ಪಕ್ಷದ ತತ್ವ ಸಿದ್ಧಾಂತದ ಬಗ್ಗೆ ವಿವರಿಸಿದರು. ಉಪ್ಪಿನಂಗಡಿ ವಲಯ ಕಾರ್ಯದರ್ಶಿ ಅಬ್ದುಲ್ಲಾ ಆದರ್ಶನಗರ, ಆದರ್ಶನಗರ ಬ್ರಾಂಚ್ ಅಧ್ಯಕ್ಷರಾದ ಯೂಸುಫ್ ಬೇರಿಕೆ, ಕಾರ್ಯದರ್ಶಿ ಇಸ್ಮಾಯಿಲ್ ಉಪಸ್ಥಿತರಿದ್ದರು.

- Advertisement -

Latest News

error: Content is protected !!