Thursday, June 25, 2026
Homeಕರಾವಳಿಮಂಗಳೂರುಅಕ್ರಮ ಮರಳುಗಾರಿಕೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರು

ಅಕ್ರಮ ಮರಳುಗಾರಿಕೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರು

- Advertisement -
- Advertisement -

ಉಪ್ಪಿನಂಗಡಿ; ಅಕ್ರಮ ಮರಳುಗಾರಿಕೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ  ಬಿಳಿಯೂರು ಗ್ರಾಮದ ಉಮೇಶ್ (40) ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಸುಂದರ (27) ಬಂಧಿತ ಆರೋಪಿಗಳು.

ಪ್ರಕರಣದ ವಿವರ; ಉಪ್ಪಿನಂಗಡಿ ಅವಿನಾಶ್‌ ಹೆಚ್‌, ಪೊಲೀಸ್‌ ಉಪನಿರೀಕ್ಷಕರಾದ  (ಕಾ&ಸು) ರವರು ಈ ದಿನ 24-08-2025 ರಂದು, ಇಲಾಖಾ ಜೀಪು ನಂಬ್ರ  ಕೆಎ-19-ಜಿ-0863 ನೇದರಲ್ಲಿ ಚಾಲಕನಾಗಿ ಸಿಪಿಸಿ 2380 ಮತ್ತು ಸಿ.ಪಿ.ಸಿ 1966 ಮತ್ತು ಸಿ.ಪಿ ಸಿ 2277 ನೇ ರವರೊಂದಿಗೆ ರೌಂಡ್ಸ್‌ ಕರ್ತವ್ಯದಲ್ಲಿ ಪೆರ್ನೆ ಜಂಕ್ಷನ್‌ ಬಳಿ ಇರುವ ಸಮಯ ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ನೇತ್ರಾವತಿ ನದಿಯಿಂದ ಸಾಮಾನ್ಯ ಮರಳನ್ನು ಯಾರೋ ಇಬ್ಬರು ಕಳ್ಳತನ ಮಾಡಿ ಕಳಂಜಕೋಡಿ ಮಾರ್ಗವಾಗಿ ಪಿಕಫ್‌ ವಾಹನದಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಮೇಗಿನ ಮನೆ ಕಳಂಜ ಎಂಬಲ್ಲಿಗೆ ಸಮಯ 19:45 ಗಂಟೆಗೆ ತಲುಪಿದಾಗ ಪಿಕಫ್‌ ವಾಹನವೊಂದು ಬರುತ್ತಿರುವುದನ್ನು ಕಂಡು ಪಿಕಫ್‌ ವಾಹನವನ್ನು ನಿಲ್ಲಿಸುವಂತೆ ಸೂಚನೆಯನ್ನು ನೀಡಿದಾಗ ಪಿಕಫ್‌ ವಾಹನ ಚಾಲಕನು ಪಿಕಪ್ ವಾಹನವನ್ನು ನಿಲ್ಲಿಸಿದ್ದು,  ಸದ್ರಿ ಪಿಕಪ್‌  ವಾಹನವನ್ನು ಪರಿಶೀಲನೆ ಮಾಡಿದಾಗ ಪಿಕಫ್‌ ವಾಹನದಲ್ಲಿ ಸಾಮಾನ್ಯ ಮರಳು ತುಂಬಿರುವುದು ಕಂಡು ಬಂದಿದ್ದು, ಆರೋಪಿಗಳಾದ ಪಿಕಪ್‌ ವಾಹನ ಚಾಲಕ ಉಮೇಶ ಮೂಲ್ಯ ಪ್ರಾಯ: 43 ವರ್ಷ ತಂದೆ: ವಾಸು ಮೂಲ್ಯ ವಾಸ: ಮಲ್ಲಡ್ಕ ಮನೆ , ಬಿಳಿಯೂರು ಗ್ರಾಮ ಬಂಟ್ವಾಳ ತಾಲೂಕು ಹಾಗೂ ಸುಂದರ ಪ್ರಾಯ: 27 ವರ್ಷ ತಂದೆ: ಮುದ್ದ ಮುಗೇರ ವಾಸ: ಹನುಮಾಜೆ ಮನೆ, ಪೆರ್ನೆ ಗ್ರಾಮ ಬಂಟ್ವಾಳ ತಾಲೂಕು ಎಂಬವರು ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಅರ್ಬಿ ಎಂಬಲ್ಲಿ ಹರಿಯುತ್ತಿರುವ ನದಿಯಿಂದ ಯಾವುದೇ ಪರವಾನಿಗೆ ಯಾ ಅನುಮತಿಯನ್ನು ಪಡೆಯದೇ ಅಕ್ರಮವಾಗಿ ತೆಗೆದು ಸಾಮಾನ್ಯ ಮರಳನ್ನು ಕಳವು ಮಾಡಿಕೊಂಡು ಗಿರಾಕಿಗಳಿಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕೆಎ-19-ಎಬಿ-4310 ನೇ ಪಿಕಪ್ ವಾಹನದಲ್ಲಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು, ಸದ್ರಿ ಸಾಮಾನ್ಯ ಮರಳಿನ ಅಂದಾಜು ಮೌಲ್ಯ 6,000/- ರೂ ಆಗಬಹುದು ಹಾಗೂ ಪಿಕಪ್‌ ವಾಹನದ ಅಂದಾಜು ಮೌಲ್ಯ 4,00,000/- ರೂ ಆಗಬಹುದು. ಸದ್ರಿ ಪಿಕಪ್‌ ವಾಹನ ಹಾಗೂ ಸಾಮಾನ್ಯ ಮರಳನ್ನು ಮುಂದಿನ ಕ್ರಮದ ಬಗ್ಗೆ ಮಹಜರು ತಯಾರಿಸಿಕೊಂಡು ಪಿರ್ಯಾದುದಾರರು ಸ್ವಾಧೀನಪಡಿಸಿ ನೀಡಿದ ವರದಿಯಂತೆ ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!