Thursday, October 15, 2026
Homeಕರಾವಳಿಮಂಗಳೂರುಬೆಳ್ತಂಗಡಿ : ವಿಚಾರಣೆ ಮುಗಿಸಿ ಹೊರಟ ಯೂಟ್ಯೂಬರ್ ಸಮೀರ್.ಎಮ್.ಡಿ: ಒಟ್ಟು 9:30 ಗಂಟೆ ವಿಚಾರಣೆ ಎದುರಿಸಿದ...

ಬೆಳ್ತಂಗಡಿ : ವಿಚಾರಣೆ ಮುಗಿಸಿ ಹೊರಟ ಯೂಟ್ಯೂಬರ್ ಸಮೀರ್.ಎಮ್.ಡಿ: ಒಟ್ಟು 9:30 ಗಂಟೆ ವಿಚಾರಣೆ ಎದುರಿಸಿದ ದೂತ

- Advertisement -
- Advertisement -

ಬೆಳ್ತಂಗಡಿ : ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬರ್ ಸಮೀರ್.ಎಮ್.ಡಿ ವಿರುದ್ಧ ದಾಖಲಾದ ಧರ್ಮಸ್ಥಳದಲ್ಲಿ ಪ್ರಕರಣ ಸಂಬಂಧ ಬೆಳ್ತಂಗಡಿ ಸರ್ಕಲ್‌ ಇನ್ಸ್ಪೆಕ್ಟರ್ ಕಚೇರಿಗೆ ಆ.25 ರಂದು 12:20 ಕ್ಕೆ ಎರಡನೇ ದಿನ ವಿಚಾರಣೆಗೆ ತನ್ನ ವಕೀಲರ ಜೊತೆ ಕಾರಿನಲ್ಲಿ ಆಗಮಿಸಿದ್ದ. ಮೊದಲು ಧರ್ಮಸ್ಥಳ ಪ್ರಕರಣದ ವಿಚಾರಣೆಯನ್ನು ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಮಾಡಿದ್ದು, ಬಳಿಕ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಬೆನಕ ಆಸ್ಪತ್ರೆಯಲ್ಲಿ ಗುಂಪು ಸೇರಿ ಗಲಾಟೆ ಮತ್ತು ಮಾಧ್ಯಮದವರ ಮೇಲೆ ಹಲ್ಲೆ ಪ್ರಕರಣದ ವಿಚಾರಣೆಯನ್ನು ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ್ ವಿಚಾರಣೆ ನಡೆಸಿ ರಾತ್ರಿ 10 ಗಂಟೆಗೆ ವಿಚಾರಣೆ ಮುಗಿಸಿಕೊಂಡು ವಾಪಸ್ ತೆರಳಿದ್ದಾನೆ‌‌. ಒಟ್ಟು 9:30 ಗಂಟೆಗಳ ಕಾಲ ವಿಚಾರಣೆ ಮುಗಿಸಿದ್ದಾನೆ.

ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಮತ್ತೆ ವಿಚಾರಣೆಗೆ ಕರೆದಾಗ ಬರಬೇಕು ಹಾಗೂ ಕಂಪ್ಯೂಟರ್ ಮತ್ತು ಮೊಬೈಲ್ ಪೊಲೀಸರಿಗೆ ನೀಡಬೇಕೆಂದು ನೋಟಿಸ್ ನೀಡಿದ್ದಾರೆ.

- Advertisement -

Latest News

error: Content is protected !!