Wednesday, June 24, 2026
Homeಕರಾವಳಿಉಪ್ಪಿನಂಗಡಿ - ಬೆಳ್ತಂಗಡಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣ; ಕಣ್ಣೂರಿನ ತಂಗಚ್ಚ ಬಗ್ಗೆ ಮಾಹಿತಿಗಾಗಿ ಪ್ರಕಟಣೆ...

ಉಪ್ಪಿನಂಗಡಿ – ಬೆಳ್ತಂಗಡಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣ; ಕಣ್ಣೂರಿನ ತಂಗಚ್ಚ ಬಗ್ಗೆ ಮಾಹಿತಿಗಾಗಿ ಪ್ರಕಟಣೆ ಬಿಡುಗಡೆ

- Advertisement -
- Advertisement -

ಮಂಗಳೂರು : ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಪರಿಸರಗಳಲ್ಲಿ ಕಳೆದ ಎರಡು ದಿನಗಳಲ್ಲಿ ನಡೆದಿರುವ ಮನೆಗಳ್ಳತನ ಪ್ರಕರಣಗಳಲ್ಲಿ ಕೇರಳ  ರಾಜ್ಯದ  ಕಣ್ಣೂರು ತಳಿಪರಂಬು ನಿವಾಸಿ ತಂಗಚ್ಚ ಯಾನೆ ಮ್ಯಾಧ್ಯೂ ಯಾನೆ ಬಶೀರ್ ಎಂಬಾತನು ಭಾಗಿಯಾಗಿರುವ ಸಂಶಯವಿದ್ದು,  ಶಂಕಿತ ಆಸಾಮಿಯ ವಿರುದ್ಧ ಈಗಾಗಲೇ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಜಾಮೀನುರಹಿತ ಬಂಧನ ವಾರೆಂಟ್‌ ಜಾರಿಯಾಗಲು ಬಾಕಿ ಇರುತ್ತದೆ  ಎಂದು ದ. ಕ. ಜಿಲ್ಲಾ ಪೊಲೀಸರು ಮೇ.19 ಕ್ಕೆ ಪ್ರಕಟಣೆಯಲ್ಲಿ ಮೂಲಕ ತಿಳಿಸಿದ್ದಾರೆ.

 ಶಂಕಿತ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ

ಉಪ್ಪಿನಂಗಡಿ ಪೊಲೀಸ್ ಠಾಣೆ: 08251-251055,  9480805362,

ಬೆಳ್ತಂಗಡಿ ಪೊಲೀಸ್‌ ಠಾಣೆ: 08256-232093, 9480805370

ಪುತ್ತೂರು ಪೊಲೀಸ್ ಠಾಣಾ ಉಪನಿರೀಕ್ಷಕರು: 08251-230555,  9480805361

ಅಥವಾ

ದಕ್ಷಿಣ ಕನ್ನಡ ಜಿಲ್ಲಾ ಕಂಟ್ರೋಲ್ ರೂಂ ಸಂಖ್ಯೆ: 9480805300 / 0824 2220500 ಕ್ಕೆ

ಕರೆಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಪ್ರಕಟಣೆಯಲ್ಲಿ ಮೂಲಕ ತಿಳಿಸಲಾಗಿದೆ.

- Advertisement -

Latest News

error: Content is protected !!