- Advertisement -
- Advertisement -
ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಇದ್ರಿಂದ ಆರ್ಥಿಕ ಸಂಕಷ್ಟ ಎದುರಾಗಲಿದೆ. ಇದ್ರ ಮಧ್ಯೆ ಜನಸಂಖ್ಯೆ ದೊಡ್ಡ ಸಮಸ್ಯೆಯಾಗದಿರಲಿ ಎನ್ನುವ ಕಾರಣಕ್ಕೆ ಕಾಂಡೋಮ್ ಪ್ಯಾಕ್ ಗಳನ್ನು ಉಚಿತವಾಗಿ ವಿತರಿಸಲಾಗ್ತಿದೆ. ಉತ್ತರ ಪ್ರದೇಶದ ಬಲಿಯಾದಲ್ಲಿ ಕಾಂಡೋಮ್ ವಿತರಣೆಯಾಗ್ತಿದೆ.
ಉತ್ತರ ಪ್ರದೇಶದ ಬಲಿಯಾದ ಪ್ರತಿ ಮನೆಗೂ ಕಾಂಡೋಮ್, ಮಾಲಾ-ಡಿ ಮತ್ತು ಕುಟುಂಬ ಯೋಜನೆ ಕಿಟ್ ಗಳನ್ನು ವಿತರಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ಹಾಗಾಗಿ ಆರೋಗ್ಯ ಇಲಾಖೆ ತಂಡ ಮನೆ ಮನೆಗೆ ಹೋಗಿ ಕಿಟ್ ವಿತರಣೆ ಮಾಡ್ತಿದೆ. ಲಾಕ್ ಡೌನ್ ನಂತ್ರ ಜನಸಂಖ್ಯೆ ಸಮಸ್ಯೆ ಸರ್ಕಾರಕ್ಕೆ ದೊಡ್ಡ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕೆ ಜಿಲ್ಲಾಡಳಿತ ಈ ಕ್ರಮಕೈಗೊಂಡಿದೆ.
ಲಾಕ್ ಡೌನ್ ಹಿನ್ನಲೆಯಲ್ಲಿ ಜನರಿಗೆ ಔಷಧಿ ಮಳಿಗೆಯಲ್ಲಿ ಕಾಂಡೋಮ್ ಸಿಗ್ತಿಲ್ಲ. ಇದ್ರಿಂದ ಜನಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
- Advertisement -