ನವದೆಹಲಿ : ಈಗಾಗಲೇ ಅನ್ ಲಾಕ್ 5.0 ಮಾರ್ಗಸೂಚಿ ನಿಯಮಗಳನ್ನು ಅಕ್ಟೋಬರ್ 30ರವರೆಗೆ ಕೇಂದ್ರ ಸರ್ಕಾರ ನಿಗದಿಗೊಳಿಸಿತ್ತು. ಇದೀಗ ಇಂತಹ ಅನ್ ಲಾಕ್ 5.0 ಅನ್ನು ನವೆಂಬರ್ 30ರವರೆಗೆ ವಿಸ್ತರಿಸಿ ಆದೇಶಿಸಿದೆ.
ಈ ಕುರಿತಂತೆ ಕೇಂದ್ರ ಸರ್ಕಾರ ಪರಿಷ್ಕೃತ ಮಾರ್ಗ ಸೂಚಿ ಕೂಡ ಪ್ರಕಟಿಸಿದ್ದು, ಅನ್ ಲಾಕ್ 5.0 ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ ಎಂಬುದಾಗಿ ತಿಳಿಸಿದೆ. ಹೀಗಾಗಿ ಅನ್ ಲಾಕ್ 5.0 ಅಕ್ಟೋಬರ್ 30 ಮುಕ್ತಾಯಗೊಳ್ಳುವುದಿಲ್ಲ. ನವೆಂಬರ್ 30ರವರೆಗೆ ವಿಸ್ತರಣೆ ಗೊಳ್ಳಲಿದೆ.
ದೇಶಾದ್ಯಂತ ಕಂಟೈನ್ಮೆಂಟ್ ಝೋನ್‌ಗಳಲ್ಲಿ ಲಾಕ್ ಡೌನ್ ನವೆಂಬರ್ 30ರ ತನಕ ಮುಂದುವರೆಯಲಿದೆ. ಉಳಿದ ಪ್ರದೇಶಗಳಲ್ಲಿ ಅನ್ ಲಾಕ್ 5.0 ಮಾರ್ಗಸೂಚಿಯಲ್ಲಿ ಪ್ರಕಟಿಸಿದ ನಿಯಮಗಳು ಜಾರಿಯಲ್ಲಿರುತ್ತವೆ.
ಅನ್ ಲಾಕ್ 5 ಮಾರ್ಗಸೂಚಿಯಲ್ಲಿ ಚಿತ್ರ ಮಂದಿರ, ಈಜುಕೊಳ, ಕ್ರೀಡಾ ತರಬೇತಿ, ಮನೋರಂಜನಾ ಪಾರ್ಕ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು. ಚಿತ್ರಮಂದಿರಲ್ಲಿ ಶೇ 50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಬೇಕು ಎಂದು ತಿಳಿಸಲಾಗಿತ್ತು. ಇದು ನವೆಂಬರ್ 30ರ ತನಕ ಮುಂದುವರೆಯಲಿದೆ.