Saturday, May 18, 2024
Homeಕರಾವಳಿನ.17 ರಿಂದ ಪದವಿ ತರಗತಿಗಳು ಆರಂಭ: ವಿದ್ಯಾರ್ಥಿಗಳಿಗೆ 2 ಆಯ್ಕೆ ನೀಡಿದ ಮಂಗಳೂರು ವಿವಿ

ನ.17 ರಿಂದ ಪದವಿ ತರಗತಿಗಳು ಆರಂಭ: ವಿದ್ಯಾರ್ಥಿಗಳಿಗೆ 2 ಆಯ್ಕೆ ನೀಡಿದ ಮಂಗಳೂರು ವಿವಿ

spot_img
- Advertisement -
- Advertisement -

ಮಂಗಳೂರು :  ನವೆಂಬರ್‌ 17ರಿಂದ ಪದವಿ, ಸ್ನಾತಕೋತ್ತರ ಪದವಿ ತರಗತಿಗಳನ್ನು ಆರಂಭ ಮಾಡುವುದಾಗಿ ಈಗಾಗಲೇ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಹೀಗಾಗಿ ಮಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಆನ್‌ಲೈನ್, ಆಫ್ ಲೈನ್ ಕ್ಲಾಸ್ ಎಂಬ ಎರಡು ಆಯ್ಕೆಗಳನ್ನು ನೀಡಲಿದೆ.

ಸರ್ಕಾರ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು ನವೆಂಬರ್ 17ರಿಂದ ಆರಂಭ ಮಾಡುವುದಾಗಿ ಘೋಷಣೆ ಮಾಡಿದೆ. ಕೋವಿಡ್ ಲಾಕ್ ಡೌನ್ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಕಾಲೇಜುಗಳನ್ನು ತೆರೆಯಲಾಗುತ್ತಿದೆ.

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಈ ಕುರಿತು ಮಾಹಿತಿ ನೀಡಿದ್ದಾರೆ. “ಸ್ಥಳೀಯ ಕೋವಿಡ್ ಪರಿಸ್ಥಿತಿ, ಸರ್ಕಾರದ ಮಾರ್ಗಸೂಚಿಗಳನ್ನು ಪರಿಶೀಲನೆ ಮಾಡಿದ ಬಳಿಕ ಕಾಲೇಜುಗಳನ್ನು ತೆರೆಯುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ” ಎಂದು ಹೇಳಿದ್ದಾರೆ. “ಹಾಜರಾತಿಯನ್ನು ಗಂಭೀರವಾಗಿ ಪರಿಗಣನೆ ಮಾಡುವುದಿಲ್ಲ. ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಆನ್ ಲೈನ್ ಮತ್ತು ಆಫ್ ಲೈನ್ ಎಂಬ ಎರಡು ಆಯ್ಕೆಗಳನ್ನು ನೀಡಲಾಗುತ್ತದೆ” ಎಂದು ಸುಬ್ರಹ್ಮಣ್ಯ ಯಡಪಡಿತ್ತಾಯ ತಿಳಿಸಿದ್ದಾರೆ.

ಕಾಲೇಜುಗಳನ್ನು ಆರಂಭಿಸುವುದಾದದರೆ ಕೋವಿಡ್ ಮಾರ್ಗಸೂಚಿಗಳನ್ನು ಸಿದ್ಧಪಡಿಸಬೇಕು. ತರಗತಿಯಲ್ಲಿ ಎಷ್ಟು ವಿದ್ಯಾರ್ಥಿಗಳು ಇರಬೇಕು, ಸಾಮಾಜಿಕ ಅಂತರ ಕಾಪಾಡುವುದು ಹೇಗೆ? ಮುಂತಾದ ನಿಯಮ ರೂಪಿಸಬೇಕು. ತರಗತಿ ನಡೆಸುವ ಆಯ್ಕೆಯನ್ನು ಮಂಗಳೂರು ವಿವಿ ಕಾಲೇಜುಗಳಿಗೆ ಬಿಡುತ್ತಿದೆ.ವಿಶ್ವವಿದ್ಯಾಲಯದ ಶೇ 50ರಷ್ಟು ವಿದ್ಯಾರ್ಥಿಗಳು ಆನ್‌ಲೈನ್ ಕ್ಲಾಸ್‌ ಪರವಾಗಿದ್ದಾರೆ. ತರಗತಿಗಳನ್ನು ಮಾಡಿದ ಬಳಿಕ ಅದರ ವಿಡಿಯೋವನ್ನು ವಿಶ್ವವಿದ್ಯಾಲಯ ವೆಬ್ ಸೈಟ್‌ನಲ್ಲಿ ಅಪ್ ಲೋಡ್ ಮಾಡಲಾಗುತ್ತದೆ. ತರಗತಿಗೆ ಹಾಜರಾಗದ ವಿದ್ಯಾರ್ಥಿಗಳು ಅದನ್ನು ವೀಕ್ಷಿಸಬಹುದಾಗಿದೆ.

ಮಂಗಳೂರು ವಿಶ್ವವಿದ್ಯಾಲಯ ಅಂತಿಮ ವರ್ಷದ ಪದವಿ ಪರೀಕ್ಷೆಗಳ ಫಲಿತಾಂಶವನ್ನು ನವೆಂಬರ್ 15ರೊಳಗೆ ಮತ್ತು ಸ್ನಾತಕೋತ್ತರ ಪರೀಕ್ಷೆ ಫಲಿತಾಂಶವನ್ನು ಡಿಸೆಂಬರ್ 1ರೊಳಗೆ ನೀಡಲು ಸಿದ್ಧತೆಯನ್ನು ನಡೆಸುತ್ತಿದೆ.

- Advertisement -
spot_img

Latest News

error: Content is protected !!