- Advertisement -
![]()
- Advertisement -
ಉಳ್ಳಾಲ: ಮನೆ ಮಂದೆ ನಿಲ್ಲಿಸಲಾಗಿದ್ದ ಎರಡು ಕಾರುಗಳು ಹಾಗೂ ಮನೆ ಕಿಟಕಿ ಗಾಜಿಗೆ ಕಲ್ಲುಗಳನ್ನು ಎಸೆದು ದುಷ್ಕರ್ಮಿಗಳು ಹಾನಿಗೊಳಿಸಿರುವ ಘಟನೆ ಉಳ್ಳಾಲದ ನರಿಂಗಾನ ಪಂಚಾಯಿತಿ ವ್ಯಾಪ್ತಿಯ ಜಲ್ಲಿಕ್ರಾಸ್ ಬಳಿ ಇಂದು ಬೆಳಗ್ಗಿನ ಜಾವ ನಡೆದಿದೆ.
ಜಲ್ಲಿಕ್ರಾಸ್ ನಿವಾಸಿ ಅಬ್ಬಾಸ್ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ನಸುಕು 3.30 ರ ಸುಮಾರಿಗೆ ಅಂಗಳದಲ್ಲಿ ಸದ್ದು ಕೇಳಿ ಮನೆ ಮಂದಿ ಹೊರಬಂದಾಗ ಅಂಗಳದಲ್ಲಿ ನಿಲ್ಲಿಸಲಾದ ಓಮ್ನಿ ಕಾರು ಮತ್ತು ಕ್ವಾಲಿಸ್ ವಾಹನದ ಗಾಜುಗಳನ್ನು ಸಂಪೂರ್ಣ ಹಾನಿಗೊಳಿಸಲಾಗಿದೆ.
ಇನ್ನು ಮನೆಯ ಕಿಟಿಕಿ ಗಾಜನ್ನೂ ಹಾನಿಗೊಳಿಸಲಾಗಿದೆ. ರೇಷನ್ ಅಂಗಡಿ ಹೊಂದಿರುವ ಅಬ್ಬಾಸ್ ಅವರಿಗೆ ಯಾರ ಜತೆಯೂ ವೈಷಮ್ಯವಿರಲಿಲ್ಲ. ಘಟನೆಗೆ ಕಾರಣವೂ ತಿಳಿದುಬಂದಿಲ್ಲ. ಸ್ಥಳಕ್ಕಾಗಮಿಸಿದ ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
- Advertisement -


