Saturday, May 18, 2024
Homeತಾಜಾ ಸುದ್ದಿವಯಸ್ಸು ಆದ್ರೂ ಕಮ್ಮಿಯಾಗಿಲ್ಲ ಓದಿನ ಹಸಿವು : 62ನೇ ವಯಸ್ಸಿನಲ್ಲಿ ಪದವಿ ಪರೀಕ್ಷೆ ಬರೆದ ಬಿಜೆಪಿ...

ವಯಸ್ಸು ಆದ್ರೂ ಕಮ್ಮಿಯಾಗಿಲ್ಲ ಓದಿನ ಹಸಿವು : 62ನೇ ವಯಸ್ಸಿನಲ್ಲಿ ಪದವಿ ಪರೀಕ್ಷೆ ಬರೆದ ಬಿಜೆಪಿ ಶಾಸಕ

spot_img
- Advertisement -
- Advertisement -

ಜೈಪುರ: ಓದಿಗೆ ವಯಸ್ಸಿನ ಹಂಗಿಲ್ಲ ಅನ್ನೋ ಮಾತಿಗೆ ಅಕ್ಷರಶಃ ಉತ್ತಮ ಉದಾಹರಣೆ ಈ ಶಾಸಕ. ಹೌದು… ರಾಜಸ್ಥಾನದಲ್ಲಿ 62 ವರ್ಷದ ಶಾಸಕರೊಬ್ಬರು ಬಿಎ ಪರೀಕ್ಷೆ ಬರೆದಿದ್ದಾರೆ. ಉದಯಪುರ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಫೂಲ್ ಸಿಂಗ್ ಮೀನಾ ಈಗ ಅಂತಿಮ ವರ್ಷದ ಬಿಎ ಪರೀಕ್ಷೆಯನ್ನು ಬರೆದಿದ್ದಾರೆ.

40 ವರ್ಷಗಳ ನಂತರ ವಿದ್ಯಾಭ್ಯಾಸವನ್ನು ಮತ್ತೆ ಆರಂಭಿಸಿರುವ ಶಾಸಕರು, ಉದಯಪುರದಲ್ಲಿನ ಕೋಟಾ ಮುಕ್ತ ವಿಶ್ವವಿದ್ಯಾನಿಲಯ ಕೇಂದ್ರದಲ್ಲಿ ರಾಜ್ಯಶಾಸ್ತ್ರ ಪರೀಕ್ಷೆ ಬರೆಯಲು ಬಂದಾಗ ಶಾಸಕರನ್ನು ನೋಡಿ ಎಲ್ಲರಿಗೆ ಆಶ್ಚರ್ಯವಾಯಿತು.

ಶಿಕ್ಷಣ ರಾಜಕೀಯದಷ್ಟು ಮುಖ್ಯವಾಗಿರುತ್ತದೆ ಅವರು ಹೇಳಿದರು. ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟಿದ್ದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಮಹತ್ವ ಕುರಿತು ಸರಿಯಾದ ಭಾಷಣ ಮಾಡಲು ಕೂಡಾ ಆಗುತ್ತಿರಲಿಲ್ಲ. ಇದನ್ನು ತಿಳಿದು ವಿದ್ಯಾಭ್ಯಾಸ ಮತ್ತೆ ಆರಂಭಿಸಿದ್ದಾಗಿ ತಿಳಿಸಿದ್ದಾರೆ.

ಎರಡು ಬಾರಿ ಶಾಸಕರಾಗಿರುವ ಮೀನಾ, ರಾಜಕೀಯ ಕ್ಷೇತ್ರದಲ್ಲಿ ಹಲವು ಪರೀಕ್ಷೆಗಳನ್ನು ಎದುರಿಸಿದ್ದರೂ ಯಾವುದೇ ಡಿಗ್ರಿ ಇಲ್ಲದಿರುವುದು ಅಥವಾ ಬೋರ್ಡ್ ಪರೀಕ್ಷೆಯಲ್ಲಿ ಪಾಸಾಗದೆ ಇರುವುದರಿಂದ ಮುಜುಗರ ಅನುಭವಿಸುತ್ತಿದ್ದರು.

ಸೇನೆಯಲ್ಲಿ ತಮ್ಮ ತಂದೆ ನಿಧನರಾದ ಬಳಿಕ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ, ಕುಟುಂಬವನ್ನು ನೋಡಿಕೊಳ್ಳಲು ಕೃಷಿಯಲ್ಲಿ ತೊಡಗಿಸಿಕೊಂಡೆ. ಇದರಿಂದಾಗಿ ಶಾಲಾ ಶಿಕ್ಷಣವನ್ನು ಸಹ ಪೂರ್ಣಗೊಳಿಸಲು ಆಗಲಿಲ್ಲ.

ಸ್ನಾತಕೋತ್ತರ ಹಾಗೂ ಪಿಹೆಚ್ ಡಿ ಪದವಿ ಪಡೆಯುವ ಚಿಂತನೆ ನಡೆಸಿರುವುದಾಗಿ ಶಾಸಕ ಮೀನಾ ತಿಳಿಸಿದ್ದಾರೆ. ಆದರೆ, ಅವರ ಐವರು ಪುತ್ರಿಯರಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಅವರ ಐವರು ಪುತ್ರಿಯರ ಪೈಕಿ ನಾಲ್ವರು ಇದೀಗ ಸ್ನಾತಕೋತ್ತರ ಪದವಿ ಮಾಡುತ್ತಿದ್ದಾರೆ. ಹಿರಿಯ ಪುತ್ರಿ ಕಾನೂನು ವಿಷಯದಲ್ಲಿ ಪದವಿ ಪಡೆದಿದ್ದಾರೆ.

2013ರಲ್ಲಿ ಮೊದಲ ಬಾರಿಗೆ ಅವರು ಶಾಸಕನಾದೆ, ನಂತರ ತನ್ನ ಪುತ್ರಿಯರ ಪ್ರೇರಣೆಯಿಂದ ವಿದ್ಯಾಭ್ಯಾಸವನ್ನು ಮತ್ತೆ ಆರಂಭಿಸಿದೆ. 2013ರಲ್ಲಿ 10ನೇ ತರಗತಿಗೆ ತನ್ನ ಪುತ್ರಿಯರು ದಾಖಲಿಸಿದ್ರು. ನಂತರ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು, ಇದೀಗ ಅಂತಿಮ ವರ್ಷದ ಬಿಎ ಪರೀಕ್ಷೆ ಬರೆದಿದ್ದೇನೆ. ಶೀಘ್ರದಲ್ಲಿಯೇ ಪದವಿ ಪಡೆಯುವ ವಿಶ್ವಾಸದಲ್ಲಿರುವುದಾಗಿ ಶಾಸಕರು ಹೇಳಿದ್ದಾರೆ.

- Advertisement -
spot_img

Latest News

error: Content is protected !!