Sunday, June 7, 2026
Homeಕರಾವಳಿಬೆಳ್ತಂಗಡಿ: ವಿಷಪ್ರಾಷಣ ಮಾಡಿ 8 ಸಾಕು‌ ನಾಯಿಗಳ ಮಾರಣಹೋಮ:  ಹಿಡಿಶಾಪ ಹಾಕುತ್ತಿದ್ದಾರೆ ಮುದ್ದಿನ ನಾಯಿ‌ ಕಳೆದುಕೊಂಡ...

ಬೆಳ್ತಂಗಡಿ: ವಿಷಪ್ರಾಷಣ ಮಾಡಿ 8 ಸಾಕು‌ ನಾಯಿಗಳ ಮಾರಣಹೋಮ:  ಹಿಡಿಶಾಪ ಹಾಕುತ್ತಿದ್ದಾರೆ ಮುದ್ದಿನ ನಾಯಿ‌ ಕಳೆದುಕೊಂಡ ಮಾಲೀಕರು

- Advertisement -
- Advertisement -

ಬೆಳ್ತಂಗಡಿ : ಕಳೆದ ಹತ್ತು ದಿನಗಳಲ್ಲಿ ವಿಷಪ್ರಾಷಣ ಮಾಡಿ 8 ಸಾಕುನಾಯಿಗಳ ಮಾರಣಹೋಮ ನಡೆಸಿರುವ ಪ್ರಕರಣ ಕಲ್ಮಂಜದಲ್ಲಿ ಬೆಳಕಿಗೆ ಬಂದಿದೆ.

ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಕುಂಟಲಾಜೆ ಅಜಿತ್ ನಗರದಲ್ಲಿ ಈ  ಕೃತ್ಯ ನಡೆದಿದೆ. ಪ್ರೀತಿಯಿಂದ ಅನ್ನ ಹಾಕಿ ಸಾಕು ಸಲಹಿದ ಸಾಕು ನಾಯಿಗಳನ್ನು ಕಳೆದುಕೊಂಡಿರುವ ಮನೆಮಂದಿ ಇದೀಗ ಹಿಡಿಶಾಪ ಹಾಕುತ್ತಿದ್ದಾರೆ.ಕುಂಟಲಾಜೆ ಅಜಿತ್ ನಗರದಲ್ಲಿ ದುಷ್ಕರ್ಮಿಗಳು ವಿಷ ಪ್ರಾಷಣ ಮಾಡಿ 8  ಸಾಕು ನಾಯಿಗಳ  ಜೀವತೆಗೆದಿದ್ದಾರೆ.

ಇನ್ನೂ ಸಾಕುನಾಯಿಯನ್ನು ಕಳೆದುಕೊಂಡು ಕಿಡಿಗೇಡಿಗಳ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ‌ ಸಾಕು ನಾಯಿ ಕಳೆದುಕೊಂಡವರು. ಒಂದು ಸಾಕು ನಾಯಿ ವಿಷತ ಸೇವಿಸಿ ಮನೆಗೆ ಬಂದು ನರಳುತ್ತಿದ್ದನ್ನು ನೋಡಿ ಚಿಕಿತ್ಸೆ ಕೊಡಿಸಿದ ಬಳಿಕ ಬದುಕಿ ಉಳಿದಿದೆ‌. ಊರಿನವರಿಗೆ ಹತ್ತಿರದ ಗುಡ್ಡದಲ್ಲಿ ಪ್ಲಾಸ್ಟಿಕ್ ನಲ್ಲಿ ನೀಲಿ ಬಣ್ಣವನ್ನು ಹೋಳುವ ವಿಷ ಪತ್ತೆಯಾಗಿದ್ದು ಈ ಕೃತ್ಯವನ್ನು ಸ್ಥಳೀಯರೊಬ್ಬರ ಮಾಡಿರುವ ಅನುಮಾನ ವ್ಯಕ್ತಪಡಿಸಿದ್ದಾರೆ.

ವಿಷ ಸೇವಿಸಿ ಬದುಕಿ‌ ಉಳಿದ ನಾಯಿ

- Advertisement -

Latest News

error: Content is protected !!