- Advertisement -
- Advertisement -
ಮಂಗಳೂರು: ರಾಮ್ ಸೇನಾ ಕರ್ನಾಟಕ ಸಂಸ್ಥಾಪಕ ಪ್ರಸಾದ್ ಅತ್ತಾವರ ಸಹಿತ 11 ಮಂದಿನಗರದ ಬಿಜೈ ಬಳಿಯ ಯುನಿಸೆಕ್ಸ್ ಸಲೂನ್ ದಾಳಿ ಪ್ರಕರಣದ ಆರೋಪಿಗಳಾಗಿದ್ದು, ಬುಧವಾರದಂದು ಅವರಿಗೆ ನಗರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ಇತರ ಮೂವರು ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಲಿಲ್ಲ ಎಂದು ತಿಳಿದು ಬಂದಿದೆ.
ಜ.23ರಂದು ರಾಮ್ ಸೇನಾ ಕಾರ್ಯಕರ್ತರು ಬಿಜೈನ ಯುನಿಸೆಕ್ಸ್ ಸಲೂನ್‌ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ದಾಳಿ ನಡೆಸಿ ಪೀಠೊಪಕರಣ ಧ್ವಂಸಗೊಳಿಸಿ ದಾಂಧಲೆ ಎಸಗಿದ್ದರು. ಈ ಸಂಬಂಧ ಬರ್ಕೆ ಠಾಣೆ ಪೊಲೀಸರು ಪ್ರಸಾದ್ ಸಹಿತ 14 ಮಂದಿಯನ್ನು ಬಂಧಿಸಿದ್ದರು. ಇನ್ನು ಆರೋಪಿಗಳ ಪರ ಮಯೂರಕೀರ್ತಿ ವಾದ ಮಂಡಿಸಿದ್ದರು.
- Advertisement -