Monday, June 8, 2026
Homeಅಪರಾಧಮುಂಬೈ : ಭೂಗತ ಪಾತಕಿ ಸುರೇಶ್ ಪೂಜಾರಿ ಫಿಲಿಫೈನ್ಸ್ ಪೊಲೀಸರ ವಶಕ್ಕೆ!

ಮುಂಬೈ : ಭೂಗತ ಪಾತಕಿ ಸುರೇಶ್ ಪೂಜಾರಿ ಫಿಲಿಫೈನ್ಸ್ ಪೊಲೀಸರ ವಶಕ್ಕೆ!

- Advertisement -
- Advertisement -

ಮುಂಬಯಿ: ಭೂಗತ ಪಾತಕಿ ರವಿ ಪೂಜಾರಿ ಸಹಚರನಾಗಿದ್ದ ಮೋಸ್ಟ್ ವಾಂಟೆಡ್‌ ಪಾತಕಿ ಸುರೇಶ್ ಪೂಜಾರಿಯನ್ನು ಫಿಲಿಫೈನ್ಸ್ ಪೊಲೀಸರು ವಶಕೆಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ರವಿ ಪೂಜಾರಿ ಸಹಚರನಾಗಿದ್ದ ಸುರೇಶ್ ಪೂಜಾರಿ ಮೂಲತಃ ಕುಂದಾಪುರದವನು . ಭೂಗತ ಪಾತಕಿ ಕಲಿ ಯೋಗಿಶ್ ಮತ್ತು ಸುರೇಶ್ ಪೂಜಾರಿ ಸ್ನೇಹಿತರರಾಗಿದ್ದರು.ಬೆಂಗಳೂರು ಶಭಾನ ಡೆವಲಪರ್ ಶೂಟೌಟ್ ಪ್ರಕರಣದಲ್ಲಿ ಸುರೇಶ್ ಪೂಜಾರಿ ಆರೋಪಿಯಾಗಿದ್ದ, ಹಾಗೂ ಆ ಘಟನೆ ನಡೆದ ಮೇಲೆ ದುಬೈ ಗೆ ಪರಾರಿಯಾಗಿ ಅಲ್ಲಿ ನೆಲಸಿದ್ದ.

ಯಾವುದೋ ವಿಚಾರದಲ್ಲಿ ರವಿ ಪೂಜಾರಿ ಮತ್ತು ಸುರೇಶ್ ಪೂಜಾರಿ ನಡುವೆ ವೈಮನಸ್ಸು ಉಂಟಾಗಿ‌ ತನ್ನದೇ ಒಂದು ಗ್ಯಾಂಗ್ ಕಟ್ಟಿಕೊಂದು ಮುಂಬಯಿ ಉಲ್ಲಾಸ್ ನಗರದಲ್ಲಿ ಕೊಲೆ, ಬೆದರಿಕೆ, ಹಫ್ತಾ ವಸೂಲಿ ಹೀಗೆ ಅನೇಕ ಕೇಸ್ ಗಳು ಈತನ‌ ಮೇಲೆ ಇದ್ದವು. ಮುಂಬಯಿ ನಗರದಲ್ಲಿ ಕೆಲವು ಶೂಟೌಟ್ ಕೂಡ ನಡೆಸಿದ್ದ. ಆತನ ಸಹಚರರಾದ ಕೆಲವರವನ್ನು ಪೊಲೀಸರು ಬಂಧಿಸಿದ್ದರು.

ದುಬೈ ನಿಂದ ಫಿಲಿಫೈನ್ಸ್ ಗೆ ಪರಾರಿಯಾಗಿ 2020 ರಿಂದ ಅಲ್ಲಿಯೇ ನೆಲಸಿದ್ದ ಎನ್ನಲಾಗಿದೆ. ಯುಎಸ್ ಡೋಜ್ ಮತ್ತು ಎಫ್ ಬಿಐ ಅವರ ಮಾಹಿತಿ ಪ್ರಕಾರ ಸುರೇಶ್ ಪೂಜಾರಿ ಭಾರತದ ಮೋಸ್ಟ್ ವಾಂಟೆಡ್‌ ಕ್ರಿಮಿನಲ್, ಅವನಿಂದ ಬೆದರಿಕೆ ಇದೆ ಎಂದು ಶಿಫಾರಸು ಮೇರೆಗೆ ಫಿಲಿಫೈನ್ಸ್ ಪೊಲೀಸರು ಬಂಧಿಸಿದ್ದಾರೆ.

- Advertisement -

Latest News

error: Content is protected !!