Tuesday, April 30, 2024
Homeಕರಾವಳಿಉಜಿರೆ: ಕೊರೊನಾ ತುರ್ತು ಸೇವಾ ಚಟುವಟಿಕೆ “ಆಪ್ತರಕ್ಷಕ” ಕಾರ್ಯಕ್ರಮಕ್ಕೆ ಚಾಲನೆ

ಉಜಿರೆ: ಕೊರೊನಾ ತುರ್ತು ಸೇವಾ ಚಟುವಟಿಕೆ “ಆಪ್ತರಕ್ಷಕ” ಕಾರ್ಯಕ್ರಮಕ್ಕೆ ಚಾಲನೆ

spot_img
- Advertisement -
- Advertisement -

ಬೆಳ್ತಂಗಡಿ: ಉಜಿರೆ ಬದುಕು ಕಟ್ಟೋಣ ಬನ್ನಿ ತಂಡ ,ರೋಟರಿ ಕ್ಲಬ್ ಬೆಳ್ತಂಗಡಿ, ಶ್ರೀ ಜನಾರ್ದನ ಸ್ವಾಮಿ ಸೇವಾ ಸಮಿತಿ ಉಜಿರೆ ಮತ್ತು ಗ್ರಾ.ಪಂ ಉಜಿರೆ ವತಿಯಿಂದ, ಕೊರೊನಾ ತುರ್ತು ಸೇವಾ ಚಟುವಟಿಕೆ “ಆಪ್ತರಕ್ಷಕ” ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಓಡಿಯಪ್ಪ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಆರ್ ಶೆಟ್ಟಿ, ಉಪಾಧ್ಯಕ್ಷ ರವಿ ಕುಮಾರ್ ಬರಮೇಲು ಮತ್ತು ಗ್ರಾ.ಪಂ. ಸದಸ್ಯರುಗಳು, ಉಜಿರೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪಿ.ಹೆಚ್. ಪ್ರಕಾಶ್ ಶೆಟ್ಟಿ ನೊಚ್ಚ, ಉಜಿರೆ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಅರ್ಚನಾ, ರೋಟರಿ ಕ್ಲಬ್ ಅಧ್ಯಕ್ಷ ಬಿ.ಕೆ ಧನಂಜಯ ರಾವ್, ಉಜಿರೆ ಲಕ್ಷ್ಮೀ ಗ್ರೂಪ್ಸ್‌ ಮಾಲಕ ಹಾಗೂ ಬದುಕು ಕಟ್ಟೋಣ ತಂಡದ ಮೋಹನ್ ಕುಮಾರ್ ಮತ್ತು ರಾಜೇಶ್ ಪೈ ಸಂಧ್ಯಾ ಟ್ರೇಡರ್ಸ್ ಉಜಿರೆ ಮೊದಲಾದವರು ಉಪಸ್ಥಿತರಿದ್ದರು.

ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ ಸ್ವಾಗತಿಸಿದರು. ತಿಮ್ಮಯ್ಯ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

- Advertisement -
spot_img

Latest News

error: Content is protected !!