- Advertisement -
- Advertisement -
ನವದೆಹಲಿ : ಜಗತ್ತಿನಾದ್ಯಂತ ಕೋವಿಡ್ 19 ಭೀತಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು , ಈ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಸೆಮಿಸ್ಟರ್ ಪರೀಕ್ಷೆಗಳ ಅವಧಿಯನ್ನು 3ರ ಬದಲು 2 ಗಂಟೆಗೆ ಇಳಿಕೆ ಮಾಡಲು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ ಸರಕಾರಕ್ಕೆ ಶಿಫಾರಸು ಮಾಡಿದೆ.
ಜುಲೈನಲ್ಲಿ ಕಾಲೇಜು ವಿದ್ಯಾರ್ಥಿಗಳ ಸೆಮಿಸ್ಟರ್ ಪರೀಕ್ಷೆಗಳು ನಡೆಯುವ ಸಾಧ್ಯತೆ ಇದೆ. ಸರಳ ಮತ್ತು ಪರ್ಯಾಯ ಪರೀಕ್ಷಾ ವಿಧಾನಗಳನ್ನು ವಿಶ್ವವಿದ್ಯಾಲಯಗಳು ಆಯ್ಕೆ ಮಾಡಿಕೊಳ್ಳಬಹುದು. ಮಹಾಮಾರಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಪರೀಕ್ಷೆಯ ಅವಧಿಯನ್ನು 3 ಗಂಟೆಯಿಂದ 2 ಗಂಟೆಗೆ ಇಳಿಸಬಹುದಾಗಿದೆ ಎಂದು ಯುಜಿಸಿ ಸಲಹೆ ನೀಡಿದೆ.
- Advertisement -