- Advertisement -
- Advertisement -
ಉಡುಪಿ: ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಹೊಲಿಗೆ ತರಬೇತಿ ಕೇಂದ್ರಕ್ಕೆ ತೆರಳಿದ್ದ ನಗರದ ಎಂ.ಜಿ.ಎಂ ಬಳಿಯ ನಿವಾಸಿ ಭಾಗ್ಯಶ್ರೀ ಶರಣಪ್ಪ ಮಾದರ (21) ಎಂಬ ಯುವತಿ ಸೆಪ್ಟಂಬರ್ 12 ರಂದು ಬೆಳಿಗ್ಗೆ 11:30 ರ ಸುಮಾರಿಗೆ ನಾಪತ್ತೆಯಾಗಿದ್ದಾರೆ.
ಸುಮಾರು 5 ಅಡಿ ಎತ್ತರ, ಸಪೂರ ಶರೀರ, ಗೋಧಿ ಮೈಬಣ್ಣ ಹೊಂದಿರುವ ಈಕೆ ಕನ್ನಡ ಭಾಷೆ ಮಾತನಾಡುತ್ತಾರೆ. ಯುವತಿಯ ಸುಳಿವು ಸಿಕ್ಕಲ್ಲಿ ಉಡುಪಿ ನಗರ ಪೊಲೀಸ್ ಠಾಣೆ (0820-2520444), ಕಂಟ್ರೋಲ್ ರೂಂ (0820-2526444), ಪೊಲೀಸ್ ನಿರೀಕ್ಷಕರು (9480805408) ಅಥವಾ ಪೊಲೀಸ್ ಉಪ ನಿರೀಕ್ಷಕರನ್ನು (9080805445) ಸಂಪರ್ಕಿಸುವಂತೆ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
- Advertisement -


