- Advertisement -
![]()
- Advertisement -
ಉಡುಪಿ; ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆರೂರು ಗ್ರಾಮದ ಕುಂಜಾಲು ಅಂಚೆಯ ಮೇಲಡ್ಪು ಎಂಬಲ್ಲಿ ನಡೆದಿದೆ. ಅಮ್ಮ ನಿಲಯ ನಿವಾಸಿ ಸುಶೀಲಾ ಶೆಟ್ಟಿ (60) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಸುಶೀಲಾ ಶೆಟ್ಟಿ ಅವರು ಕಳೆದ 10 ರಿಂದ 15 ವರ್ಷಗಳಿಂದ ಮಾನಸಿಕ ಖಿನ್ನತೆ, ಬಿಪಿ ಹಾಗೂ ಶುಗರ್ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಮಾರ್ಚ್ 25ರ ಸಂಜೆ 7 ಗಂಟೆಯಿಂದ ಮಾರ್ಚ್ 26ರ ಬೆಳಿಗ್ಗೆ 6 ಗಂಟೆಯ ಮಧ್ಯದಲ್ಲಿ ತಮ್ಮ ಮನೆಯ ಹಿಂಭಾಗದಲ್ಲಿರುವ ಆವರಣವಿಲ್ಲದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ .ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
- Advertisement -


