Monday, August 31, 2026
Homeಕರಾವಳಿಉಡುಪಿಉಡುಪಿ ತಾ.ಪಂ. ಸಹಾಯಕ ನಿರ್ದೇಶಕಿ ವಿಜಯ ವರ್ಗಾವಣೆ: ಬ್ರಹ್ಮಾವರ ತಾ.ಪಂ. ಇಒಗೆ ಮುಂಬಡ್ತಿ

ಉಡುಪಿ ತಾ.ಪಂ. ಸಹಾಯಕ ನಿರ್ದೇಶಕಿ ವಿಜಯ ವರ್ಗಾವಣೆ: ಬ್ರಹ್ಮಾವರ ತಾ.ಪಂ. ಇಒಗೆ ಮುಂಬಡ್ತಿ

- Advertisement -
- Advertisement -

ಉಡುಪಿ: ಉಡುಪಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರನ್ನು ವರ್ಗಾವಣೆ ಮಾಡಲಾಗಿದ್ದು, ಬ್ರಹ್ಮಾವರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಪದೋನ್ನತಿ ನೀಡಲಾಗಿದೆ.

ಉಡುಪಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕಿ ಶ್ರೀಮತಿ ವಿಜಯ ಅವರಿಗೆ ನಿಪ್ಪಾಣಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮುಂಬಡ್ತಿ ನೀಡಿ ಖಾಲಿ ಇದ್ದ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಬ್ರಹ್ಮಾವರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಇಬ್ರಾಹಿಂ ಪುರ ಹೆಚ್‌.ವಿ. ಅವರಿಗೆ ವೇತನ ಶ್ರೇಣಿ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಲ್ಲಿ ಮುಂದುವರಿಸಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 22 ಅಧಿಕಾರಿಗಳಿಗೆ ವೇತನಶ್ರೇಣಿಯೊಂದಿಗೆ ಭವಿಷ್ಯವರ್ತಿಯಾಗಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

- Advertisement -

Latest News

error: Content is protected !!