Tuesday, April 23, 2024
Homeಕರಾವಳಿಉಡುಪಿಉಡುಪಿ_ ನೆಟ್ ವರ್ಕ್ ಗಾಗಿ ದಟ್ಟ ಅರಣ್ಯದ ಗುಡ್ಡ ಏರುವ ವಿದ್ಯಾರ್ಥಿಗಳು...!!!

ಉಡುಪಿ_ ನೆಟ್ ವರ್ಕ್ ಗಾಗಿ ದಟ್ಟ ಅರಣ್ಯದ ಗುಡ್ಡ ಏರುವ ವಿದ್ಯಾರ್ಥಿಗಳು…!!!

spot_img
- Advertisement -
- Advertisement -

ಉಡುಪಿ_ಕೊರೊನಾ‌ ಕಾರಣದಿಂದ ಶಾಲಾ ಕಾಲೇಜು ಇನ್ನೂ ಆರಂಭ ಆಗಿಲ್ಲ, ಸದ್ಯ ಆನ್ಲೈನ್ ಕ್ಲಾಸ್ ನಡೆಯುತ್ತಿದೆ. ಇಂಟರ್ನೆಟ್ ಸರಿಯಾಗಿ ಸಿಗುವ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ಸಮಸ್ಯೆ ಇಲ್ಲ, ಆದ್ರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸರಿಯಾಗಿ ನೆಟ್ವರ್ಕ್ ಸಿಗದ ಪರದಾಡುವ ಸ್ಥಿತಿ ಇದೆ.. ಅದರಲ್ಲೂ ಈ ಹಳ್ಳಿಯಲ್ಲಿ ಇಂಟರ್ನೆಟ್ ಸೌಲಭ್ಯವೇ ಇಲ್ಲದೇ ವಿದ್ಯಾರ್ಥಿಗಳು ಗುಡ್ಡದ ಮೇಲೆ ಟೆಂಟ್ ಹಾಕಿ ಆನ್ಲೈನ್ ಕ್ಲಾಸ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದು 4 ಜೀ ಜಮಾನ, ಇಂಟರ್ನೆಟ್ ಮೂಲಕ ಎಲ್ಲ ಕೆಲಸವೂ ವೇಗವಾಗಿ ನಡೆಯುತ್ತಿದೆ.. ಆನ್ಲೈನ್ ಕ್ಲಾಸ್, ಆನ್ಲೈನ್ ಮೀಟಿಂಗ್, ವರ್ಕ್ ಫರ್ಮ್ ಹೋ ಎಲ್ಲದಕ್ಕೂ ಇಂಟರ್ನೆಟ್ ಬೇಕೇ ಬೇಕು.. ಇಂತಹ ಕಾಲದಲೂ ಅದೆಷ್ಟೋ ಗ್ರಾಮೀಣ ಭಾಗದ ಅದೆಷ್ಟೋ ಜನ ಇಂಟರ್ನೆಟ್ ಸೌಲಭ್ಯ ಇಲ್ಲದೇ ಕಷ್ಟ ಪಡುತ್ತಿದ್ದಾರೆ.

ಹೌದು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಹಂಜ, ಕಾರೀಮನೆ ಹಾಗೂ ಎಡ್ಮಲೆ ಪರಿಸರದಲ್ಲಿ ನೆಟ್ವರ್ಕ್ ಸೌಲಭ್ಯವೇ ಇಲ್ಲ. ತೀರ ಹಿಂದುಳಿದ ಗ್ರಾಮ ಇದು ಇಲ್ಲಿ ಕಾಡು ಗುಡ್ಡಗಳೇ ಹೆಚ್ಚಾಗಿರುವ ನಕ್ಸಲ್ ಪೀಡಿತ ಪ್ರದೇಶ. ಸುಮಾರು 54 ಮನೆಗಳಿದ್ದು, 450 ರಿಂದ 500 ವಾಸಿಸುತ್ತಿದ್ದಾರೆ. ಒಂದನೇ ತರಗತಿಯಿಂದ ಐಟಿಐ, ಪದವಿ ಸ್ನಾತಕೋತ್ತರ 32 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಎಲ್ಲರಿಗೂ ಆನ್ಲೈನ್ ಪಾಠ ನಡೆಯುತ್ತಿದ್ದು,
ಮನೆಯಲ್ಲಿ ನೆಟ್ವರ್ಕ್ ಸಿಗದ ಕಾರಣ, ವಿದ್ಯಾರ್ಥಿಗಳು 5 ಕಿಲೋಮೀಟರ್ ದೂರದ ಬೆಟ್ಟವೇರಿ ಆನ್ಲೈನ್ ಕ್ಲಾಸ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಗುಡ್ಡದ ಮೇಲೆ ಪೋಷಕರು ಟೆಂಟ್ ನಿರ್ಮಿಸಿದ್ದು, ಕಾಡಿನ ಮಧ್ಯದಲ್ಲಿ ಇರುವ ಈ ಟೆಂಟ್‌ನಲ್ಲಿ ಕುಳಿತು ವಿದ್ಯಾರ್ಥಿಗಳು ಪಾಠ ಆಲಿಸುವ ಪರಿಸ್ಥಿತಿ ಇದೆ. ಕರಾವಳಿಯಲ್ಲಿ ಬಾರೀ ಮಳೆಯಾಗುತ್ತಿದೆ.. ಚಿಕ್ಕ ಚಿಕ್ಕ ಮಕ್ಕಳನ್ನು ಬೆಟ್ಟಕ್ಕೆ ಕರೆದುಕೊಂಡು ಬಂದು ಚಿಕ್ಕ ಟೆಂಟ್‌ನಲ್ಲಿ ಪಾಠ ಕೇಳುದಕ್ಕೂ ಕಷ್ಟವಾಗುತ್ತಿದೆ ಹಾಗಾಗಿ ತಮ್ಮೂರಿಗೂ ನೆಟ್ವರ್ಕ್ ಭಾಗ್ಯ ಕಲ್ಪಿಸಿ ಅಂತ ಸಂಬಂಧ ಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ..

ಈ ಭಾಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಕಷ್ಟ ಪಡುತ್ತಿದ್ದಾರೆ. ಅಭಿವೃದ್ಧಿಯಲ್ಲಿ ಮುಂದಿರುವ ಈ ಜಿಲ್ಲೆಯಲ್ಲಿ ಈ ರೀತಿಯ ಸಮಸ್ಯೆ ನಿಜಕ್ಕೂ ಖೇಧಕರ.. ಇನ್ನಾದರೂ ಸಂಭಂಧಪಟ್ಟವರು ಇತ್ತ ಕಡೆ ಗಮನ ಹರಿಸಬೇಕಿದೆ..

- Advertisement -
spot_img

Latest News

error: Content is protected !!