Wednesday, June 3, 2026
Homeಕರಾವಳಿಉಡುಪಿಉಡುಪಿ; ಕೊಲ್ಲೂರಿನ ರೌಡಿ ಶೀಟರ್ ಶೀಟರ್ ಕಾರ್ತಿಕ್ ಆಚಾರ್ ಗಡಿಪಾರು

ಉಡುಪಿ; ಕೊಲ್ಲೂರಿನ ರೌಡಿ ಶೀಟರ್ ಶೀಟರ್ ಕಾರ್ತಿಕ್ ಆಚಾರ್ ಗಡಿಪಾರು

- Advertisement -
- Advertisement -

ಉಡುಪಿ; ಕೊಲ್ಲೂರಿನ ರೌಡಿ ಶೀಟರ್ ಶೀಟರ್ ಕಾರ್ತಿಕ್ ಆಚಾರ್ ನನ್ನು ಬೆಂಗಳೂರಿಗೆ ಗಡಿಪಾರು ಮಾಡಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ.

ಕುಂದಾಪುರ ತಾಲೂಕು ಇಡೂರು ಕುಂಜ್ಞಾಡಿ ಗ್ರಾಮದ ಹೊಸಿಮನೆ ನಿವಾಸಿ ಕಾರ್ತಿಕ್ ಆಚಾರ್ ವಿರುದ್ಧ ಈಗಾಗಲೇ ಕೊಲ್ಲೂರು ಠಾಣೆಯಲ್ಲಿ ಒಟ್ಟು 4 ಗಂಭೀರ ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ರೌಡಿ ಶೀಟ್ ತೆರೆಯಲಾಗಿದ್ದು, ಸಮಾಜದ ಶಾಂತಿ ಕದಡುತ್ತಿದ್ದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಂಗ ದಂಡಾಧಿಕಾರಿಯೂ ಆಗಿರುವ ಉಡುಪಿ ಎಸ್‌ಪಿ ಅವರು ಏಪ್ರಿಲ್ 9ರಂದು ಈ ಗಡಿಪಾರು ಆದೇಶ ಜಾರಿಗೊಳಿಸಿದ್ದಾರೆ.
ಗಡಿಪಾರು ಆದೇಶದನ್ವಯ ಕಾರ್ತಿಕ್ ಆಚಾರ್‌ನನ್ನು ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ಗಡಿಪಾರು ಅವಧಿಯಲ್ಲಿ ಈತ ಅನುಮತಿಯಿಲ್ಲದೆ ಜಿಲ್ಲೆಗೆ ಪ್ರವೇಶಿಸುವಂತಿಲ್ಲ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.

- Advertisement -

Latest News

error: Content is protected !!