Monday, June 8, 2026
Homeಕರಾವಳಿಉಡುಪಿಉಡುಪಿ: ಕೊರೋನಾ ಆತಂಕದಲ್ಲಿ ಐಸೋಲೇಷನ್ ವಾರ್ಡ್​ನಲ್ಲಿ‌ದ್ದ ವ್ಯಕ್ತಿ ಆತ್ಮಹತ್ಯೆ.. ಆದರೆ ಕೊರೋನಾ ವರದಿ ಹೇಳುವುದೇ ಬೇರೆ...

ಉಡುಪಿ: ಕೊರೋನಾ ಆತಂಕದಲ್ಲಿ ಐಸೋಲೇಷನ್ ವಾರ್ಡ್​ನಲ್ಲಿ‌ದ್ದ ವ್ಯಕ್ತಿ ಆತ್ಮಹತ್ಯೆ.. ಆದರೆ ಕೊರೋನಾ ವರದಿ ಹೇಳುವುದೇ ಬೇರೆ…

- Advertisement -
- Advertisement -

ಉಡುಪಿ: ಜಿಲ್ಲಾಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್​ನಲ್ಲಿ‌ದ್ದ ವ್ಯಕ್ತಿಯೊಬ್ಬ ಕೊರೋನಾಆತಂಕದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.

ಕೊರೋನಾ ಲಕ್ಷಣಗಳು ಕಂಡು ಬಂದಿದ್ದ ಪ್ರಭಾಕರ್ ಪುತ್ರನ್ (63) ಮೂರು ದಿನಗಳ ಹಿಂದೆ ಉಡುಪಿ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್​ಗೆ ದಾಖಲಾಗಿದ್ದರು. ಆದರೆ ಇಂದು ತನಗೆ ಕೊರೋನಾ ಬಂದಿರಬಹುದು ಎಂದು ಆತಂಕದಲ್ಲಿ ಪ್ರಭಾಕರ್ ಪುತ್ರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆದರೆ ಆತ್ಮಹತ್ಯೆಯ ಕೆಲಹೊತ್ತಿನ ನಂತರ ಇವರ ಕೊರೋನಾ ಪರೀಕ್ಷಾ ವರದಿ ವೈದ್ಯರ ಕೈ ಸೇರಿದ್ದು, ಅದರಲ್ಲಿ ಇವರಿಗೆ ಕೊರೊನಾ ವರದಿ ನೆಗೆಟಿವ್ ಬಂದಿದೆ. ತನ್ನ ಅವಸರದ ನಿರ್ಧಾರದಿಂದ ಪ್ರಾಣ ಕಳೆದುಕೊಂಡಂತಾಗಿದೆ.

ಘಟನೆಯ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!