Monday, June 8, 2026
Homeಕರಾವಳಿಉಡುಪಿಉಡುಪಿಯಲ್ಲಿ ವೀರ ಸಾವರ್ಕರ್ ಸರ್ಕಲ್ ನಿರ್ಮಾಣಕ್ಕೆ ಉಡುಪಿ ನಗರಸಭೆ ಒಪ್ಪಿಗೆ

ಉಡುಪಿಯಲ್ಲಿ ವೀರ ಸಾವರ್ಕರ್ ಸರ್ಕಲ್ ನಿರ್ಮಾಣಕ್ಕೆ ಉಡುಪಿ ನಗರಸಭೆ ಒಪ್ಪಿಗೆ

- Advertisement -
- Advertisement -

ಉಡುಪಿ: ಉಡುಪಿಯಲ್ಲಿ ಸಾವರ್ಕರ್ ಸರ್ಕಲ್ ನಿರ್ಮಾಣಕ್ಕೆ ಉಡುಪಿ ನಗರಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ.

ಕಾಂಗ್ರೆಸ್ ಪಕ್ಷದಿಂದ ಯಾವುದೇ ವಿರೋಧ ಇಲ್ಲದೇ ನಿರ್ಣಯ ಕೈಗೊಳ್ಳಲಾಗಿದ್ದು, ಉಡುಪಿ ನಗರದ ಹೃದಯ ಭಾಗದಲ್ಲಿ ವೀರ ಸಾವರ್ಕರ್ ಸರ್ಕಲ್ ನಿರ್ಮಾಣಕ್ಕೆ ಒಪ್ಪಿಗೆ ದೊರೆತಿದೆ.

ಜಿಲ್ಲಾ ನ್ಯಾಯಾಲಯದ ಬಳಿ ಸಾವರ್ಕರ್ ಸರ್ಕಲ್ ನಿರ್ಮಾಣಕ್ಕೆ ನಗರಸಭೆ ಒಪ್ಪಿಗೆ ನೀಡಿದ್ದು, ಸಾವರ್ಕರ್ ಪುತ್ಥಳಿ ಬದಲಾಗಿ ಸರ್ಕಲ್ ನಿರ್ಮಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ನಗರಸಭೆ ಸಭೆಯಲ್ಲಿ ಉಡುಪಿ ಶಾಸಕರ ಪ್ರಸ್ತಾವನೆಯನ್ನು ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಒಪ್ಪಿದ್ದಾರೆ.

ಈ ಹಿಂದೆ ಉಡುಪಿಯ ಬ್ರಹ್ಮಗಿರಿ ಸರ್ಕಲ್ ನಲ್ಲಿ ಸಾವರ್ಕರ್ ಪುತ್ತಳಿ ನಿರ್ಮಾಣಕ್ಕೆ ಒತ್ತಾಯ ಕೇಳಿಬಂದಿತ್ತು

ಬ್ರಹ್ಮಗಿರಿ ಸರ್ಕಲ್ ಗೆ ಆಸ್ಕರ್ ಫೆರ್ನಾಂಡಿಸ್ ವೃತ್ತ ಎಂದು ನಾಮಕರಣ ಮಾಡಿ ಈ ಮೊದಲೇ ನಿರ್ಣಯಿಸಲಾಗಿತ್ತು.

- Advertisement -

Latest News

error: Content is protected !!