Monday, June 8, 2026
Homeಕರಾವಳಿಉಡುಪಿಉಡುಪಿ : ಸಾಯುತ್ತೇನೆ ಎಂದು ಮಗಳಿಗೆ ವಾಟ್ಸಾಪ್ ಮೆಸೇಜ್ ಕಳುಹಿಸಿ ತಾಯಿ ಆತ್ಮಹತ್ಯೆ

ಉಡುಪಿ : ಸಾಯುತ್ತೇನೆ ಎಂದು ಮಗಳಿಗೆ ವಾಟ್ಸಾಪ್ ಮೆಸೇಜ್ ಕಳುಹಿಸಿ ತಾಯಿ ಆತ್ಮಹತ್ಯೆ

- Advertisement -
- Advertisement -

ಉಡುಪಿ : ಸಾಯುತ್ತೇನೆ ಎಂದು ಮಗಳಿಗೆ ವಾಟ್ಸಾಪ್ ಮೆಸೇಜ್ ಮಾಡಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.ಆಶಾಲತಾ (62) ಆತ್ಮಹತ್ಯೆ ಮಾಡಿಕೊಂಡವರು.

ಆಶಾಲತಾ ತನ್ನ ದತ್ತು ಪುತ್ರಿ ಶಮೀಕ್ಷಾಳೊಂದಿಗೆ ವಾಸವಾಗಿದ್ದರು. ಅವರ ಗಂಡ ಮೃತಪಟ್ಟಿದ್ದಾರೆ. ಶಮೀಕ್ಷಾಳಿಗೂ ಹಾಗೂ ಆಶಾಲತಾ ಅವರಿಗೂ ಸಣ್ಣ ಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿ ಗಲಾಟೆಯಾಗಿದೆ ಎನ್ನಲಾಗಿದೆ.

ಆಶಾಲತಾ ಅವರು ಯಾವುದೋ ವಿಚಾರಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಮಗಳಿಗೆ ತಾನು ಸಾಯುತ್ತೇನೆ ಎಂದು ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ನಂತರ  ಮನೆಯ ಹಾಲ್‌ನ ಫ್ಯಾನಿನ ಹುಕ್ಕಿಗೆ ಸೀರೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನು ಇವರ ಮರಣದಲ್ಲಿ ಸಂಶಯವಿದೆ ಎಂದು ಆಶಾಲತಾ ಅವರ ತಂಗಿ ಜ್ಯೋತಿಪ್ರಭಾ ನೀಡಿದ ದೂರಿನ ಅನ್ವಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!