Saturday, June 6, 2026
Homeಕರಾವಳಿಕಡಬ: ತಲೆ ಮರೆಸಿಕೊಂಡಿರುವ ಪೋಕ್ಸೋ ಪ್ರಕರಣದ ಆರೋಪಿಗಾಗಿ ಪೊಲೀಸರಿಂದ ಶೋಧ

ಕಡಬ: ತಲೆ ಮರೆಸಿಕೊಂಡಿರುವ ಪೋಕ್ಸೋ ಪ್ರಕರಣದ ಆರೋಪಿಗಾಗಿ ಪೊಲೀಸರಿಂದ ಶೋಧ

- Advertisement -
- Advertisement -

ಕಡಬ: ಅಪ್ರಾಪ್ತೆಯ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯವೆಸಗಿರುವ ವಿರುದ್ಧ ಕಡಬ ಪೊಲೀಸ್ ಠಾಣೆಯ ಪೋಕ್ಸೋ ಪ್ರಕರಣ ದಾಖಲಾಗಿದೆ.

ಕಡಬ ತಾಲೂಕಿನ ಬಲ್ಯ ಸಮೀಪದ ಹೊಸಮಠ ನಿವಾಸಿ ಸುನಿಲ್ ದೇವಾಡಿಗ ಆರೋಪಿ.ಈತನ ಪತ್ತೆಗಾಗಿ ಧರ್ಮಸ್ಥಳ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಕೊಕ್ಕಡ ಸಮೀಪದ ಪಟ್ರಮೆ ಗ್ರಾಮದ ಪಟ್ಟೂರಿನ ಅಪ್ರಾಪ್ತೆದೆ ಆರು ತಿಂಗಳ ಹಿಂದೆ ತನ್ನ ಮನೆ ಸಮೀಪ ಗಾರೆ ಕೆಲಸ ಮಾಡಲು ಬಂದಿದ್ದ ಯುವಕನ ಪರಿಚಯವಾಗಿತ್ತು. ಬಳಿಕ ಆತನ ಜೊತೆ ಸಂಪರ್ಕದಲ್ಲಿದ್ದಳು ಎನ್ನಲಾಗುತ್ತಿದೆ.ಮಾರ್ಚ್ 17ರಂದು ಯುವತಿಯು ಕಾಣೆಯಾದ ಬಗ್ಗೆ ಆಕೆಯ ತಂದೆ ಧರ್ಮಸ್ಥಳ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಬೆನ್ನತ್ತಿದ ಧರ್ಮಸ್ಥಳ ಪೊಲೀಸರು ನಿಟ್ಟೆ ಸಮೀಪ ಆಕೆಯನ್ನು ಪತ್ತೆ ಹಚ್ಚಿದ್ದರು. ಬಳಿಕ ಆಕೆಯನ್ನು ವೈದ್ಯಕೀಯ ಪರೀಕ್ಷೆಯನ್ನು ಒಳಪಡಿಸಿದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ.

ಈ ಬಗ್ಗೆ ಯುವತಿಯನ್ನು ವಿಚಾರಿಸಿದಾಗ ಆಕೆ ಅಸ್ಪಷ್ಟ ಮಾಹಿತಿಯನ್ನು ನೀಡುತ್ತಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

- Advertisement -

Latest News

error: Content is protected !!