Monday, June 8, 2026
Homeಕೊಡಗುಕೊಡಗು; ನಿಲ್ಲಿಸಿದ್ದ ಕಾರನ್ನು ಹೆದ್ದಾರಿವರೆಗೂ ತಳ್ಳಿಕೊಂಡು ಬಂದ ಕಾಡಾನೆ

ಕೊಡಗು; ನಿಲ್ಲಿಸಿದ್ದ ಕಾರನ್ನು ಹೆದ್ದಾರಿವರೆಗೂ ತಳ್ಳಿಕೊಂಡು ಬಂದ ಕಾಡಾನೆ

- Advertisement -
- Advertisement -

ಕೊಡಗು;  ಕಾಡಾನೆಯೊಂದು ದಾಳಿ ಮಾಡಿ ನಿಲ್ಲಿಸಿದ್ದ ಕಾರನ್ನು ರಾಷ್ಟ್ರೀಯ ಹೆದ್ದಾರಿಗೆ ತಳ್ಳಿಕೊಂಡು ಬಂದಿರುವ ಘಟನೆ ಇಂದು ನಸುಕಿನ ವೇಳೆ 4.30ರ ಸಮಯದಲ್ಲಿ ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆಯ ಮೆಟ್ನಳದಲ್ಲಿ ನಡೆದಿದೆ. 

ಮೆಟ್ನಳ್ಳದ ಹೆದ್ದಾರಿ ಬದಿಯ ಖಾಲಿ ಜಾಗದಲ್ಲಿ ಸ್ವಿಫ್ಟ್ ಮತ್ತು ಸ್ಯಾಂಟ್ರೋ ಕಾರುಗಳು ನಿಂತಿದ್ದವು. ಮೊದಲು ಕಾಡಾನೆ ಸ್ಯಾಂಟ್ರೋ ಕಾರಿನ ಮೇಲೆ ಎರಗಿದೆ. ನಂತರ ಸಾನಿಪ್ ಎಂಬುವವರ ಸ್ವಿಫ್ಟ್  ಕಾರಿನ ಮೇಲೆ ದಾಳಿ ಮಾಡಿ ಹೆದ್ದಾರಿವರೆಗೆ ತಳ್ಳಿಕೊಂಡು ಬಂದಿದೆ.  ನಂತರ ಕಾರನ್ನು ಅಲ್ಲಿಯೇ ಬಿಟ್ಟು ಕಾಡಾನೆ ಅಲ್ಲಿಂದ ಕಾಲ್ಕಿತ್ತಿದೆ.

- Advertisement -

Latest News

error: Content is protected !!