Sunday, June 7, 2026
Homeತಾಜಾ ಸುದ್ದಿನಟ ವಿನೋದ್ ರಾಜ್ ಪತ್ನಿ ಹಾಗೂ ಮಗನೊಂದಿಗಿರುವ ಫೋಟೋ ವೈರಲ್

ನಟ ವಿನೋದ್ ರಾಜ್ ಪತ್ನಿ ಹಾಗೂ ಮಗನೊಂದಿಗಿರುವ ಫೋಟೋ ವೈರಲ್

- Advertisement -
- Advertisement -

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಕುಮಾರ್ ನಟ ವಿನೋದ್ ರಾಜ್ ಅವರು ಮದುವೆ ಆಗಿಲ್ಲ ಎಂದು ಹಲವರು ಅಂದುಕೊಂಡಿದ್ದರು. ಆದರೆ ಇದೀಗ ಸ್ಯಾಂಡಲ್ ವುಡ್ ನಿರ್ದೇಶಕ ಪ್ರಕಾಶ್ ರಾಜ್ ಮೆಹೋ ಅವರ ಪೋಸ್ಟ್ ಭಾರೀ ಚರ್ಚೆಗೆ ಕಾರಣವಾಗಿದೆ. ನಿರ್ದೇಶಕ ಪ್ರಕಾಶ್ ರಾಜ್ ಪೋಸ್ಟ್ ಮಾಡಿರುವ ಫೋಟೋದಲ್ಲಿ ವಿನೋದ್ ರಾಜ್, ತಾಯಿ ಲೀಲಾವತಿ ಇದ್ದಾರೆ. ಜೊತೆಗೆ ಅವರೊಂದಿಗೆ ಇರುವವರು ವಿನೋದ್ ರಾಜ್ ಪತ್ನಿ ಮತ್ತು ಪುತ್ರನೆಂದು ಹೇಳಲಾಗುತ್ತಿದೆ.

ಹೌದು, ಮೊದಲ ಬಾರಿಗೆ ವಿನೋದ್ ರಾಜ್ ಅವರ ಪತ್ನಿ ಅನು ಹಾಗೂ ಮಗ ಯುವರಾಜ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಫೋಟೋದಲ್ಲಿ ವಿನೋದ್ ರಾಜ್ ಜೊತೆಗೆ ತಾಯಿ ಲೀಲಾವತಿ, ಮಗ ಮತ್ತು ಪತ್ನಿ ಜೊತೆಗಿದ್ದಾರೆ ಎಂದು ಎನ್ನಲಾಗಿದೆ. ಜೊತೆಗೆ ವಿನೋದ್ ರಾಜ್ ಅವರ ಪುತ್ರ ಚೆನ್ನೈನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಅದಕ್ಕೆ ಪೂರಕವಾದ ಅಂಕಪಟ್ಟಿಯನ್ನು ಸಹ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಂಕಪಟ್ಟಿಯಲ್ಲಿ ವಿನೋದ್ ರಾಜ್ ಎಂ.ಎಲ್ ಎಂದು ಬರೆಯಲಾಗಿದೆ.

- Advertisement -

Latest News

error: Content is protected !!