Friday, June 5, 2026
Homeಕರಾವಳಿಉಡುಪಿಗೋವಾ ಸಿಎಂ ಮಾಂಸಾಹಾರ ಸೇವಿಸಿ ಕೃಷ್ಣ ಮಠಕ್ಕೆ ತೆರಳಿಲ್ಲ: ಆರೋಪ ತಳ್ಳಿ ಹಾಕಿದ ಉಡುಪಿ ಶಾಸಕ...

ಗೋವಾ ಸಿಎಂ ಮಾಂಸಾಹಾರ ಸೇವಿಸಿ ಕೃಷ್ಣ ಮಠಕ್ಕೆ ತೆರಳಿಲ್ಲ: ಆರೋಪ ತಳ್ಳಿ ಹಾಕಿದ ಉಡುಪಿ ಶಾಸಕ ರಘುಪತಿ ಭಟ್

- Advertisement -
- Advertisement -

ಉಡುಪಿ: ಗೋವಾ ಸಿಎಂ ಪ್ರಮೋದ್ ಸಾವಂತ್ ಮಾಂಸಹಾರ ಸೇವಿಸಿ ಕೃಷ್ಣ ಮಠಕ್ಕೆ ಭೇಟಿ ಆರೋಪವನ್ನು ಉಡುಪಿ ಶಾಸಕ ರಘುಪತಿ ಭಟ್ ತಳ್ಳಿ ಹಾಕಿದ್ದಾರೆ. ಉಡುಪಿಯಲ್ಲಿ ಇಂದು ಪ್ರತಿಕ್ರಿಯಿಸಿದ ರಘುಪತಿ ಭಟ್, ಮಧ್ಯಾಹ್ನ ಊಟ ಮಾಡುವಾಗ ನಾನು ಸಿಎಂ ಜೊತೆಯಲ್ಲಿ ಇದ್ದೆ, ಸಾವಂತ್ ಊಟಕ್ಕೆ ಯಾವುದೇ ಮಾಂಸಹಾರ ಸೇವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಸಿಎಂ ಜೊತೆಗೆ ಬಂದಿದ್ದ ಸಿಬ್ಬಂದಿಗಳಿಗೆ ಮಾಂಸಾಹಾರ ಊಟದ ವ್ಯವಸ್ಥೆ ಇತ್ತು, ಸಿಎಂ ಸಾವಂತ್ ಸಸ್ಯಾಹಾರ ಸೇವಿಸಿ ಮಠಕ್ಕೆ ಹೋಗಿದ್ದಾರೆ, ಆರೋಪಿಸುವವರ ಬಳಿ ಏನು ಸಾಕ್ಷ್ಯ ಇದೆ ನನಗೆ ಗೊತ್ತಿಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.‌

ಆರೋಪಿಸುವವರು ಹೋಟೆಲಿನ ಆರ್ಡರ್ ಮೆನು ನೋಡಿ ಹೇಳಿರಬಹುದು, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮೀನು ಆರ್ಡರ್ ಮಾಡಿದ್ದಾರೆ, ಚುನಾವಣೆ ಹತ್ತಿರ ಬಂದಿರೋದ್ರಿಂದ ಈ ಆರೋಪ ಬಂದಿದ್ದು, ಕಾಂಗ್ರೆಸ್ ನವರು ಪೋಟೋ, ವಿಡಿಯೋ ನೀಡಿ ಮಾತನಾಡಲಿ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

- Advertisement -

Latest News

error: Content is protected !!