Wednesday, September 23, 2026
Homeಕರಾವಳಿಉಡುಪಿಉಡುಪಿ:ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಭೀಕರ ಹತ್ಯೆ: ಕಾರಿನ ಡಿಕ್ಕಿಯಲ್ಲಿ 9 ತುಂಡಾದ ಶವ ಪತ್ತೆ

ಉಡುಪಿ:ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಭೀಕರ ಹತ್ಯೆ: ಕಾರಿನ ಡಿಕ್ಕಿಯಲ್ಲಿ 9 ತುಂಡಾದ ಶವ ಪತ್ತೆ

- Advertisement -
- Advertisement -

ಉಡುಪಿ: ಯುಎಇಯ ಶಾರ್ಜಾದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಪ್ರಕಾಶ್ ಕುಂದರ್ ಎಂಬವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ, ಮೃತದೇಹವನ್ನು 9 ತುಂಡುಗಳಾಗಿ ಕತ್ತರಿಸಿ ಕಾರಿನ ಡಿಕ್ಕಿಯಲ್ಲಿ ಬಾಂಧಿಸಿಟ್ಟ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶಾರ್ಜಾ ಏರ್‌ಪೋರ್ಟ್‌ನಲ್ಲಿ ಉದ್ಯೋಗಿಯಾಗಿದ್ದ ಪ್ರಕಾಶ್ ಅವರು ಜುಲೈ 20 ರಿಂದ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಶಾರ್ಜಾ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದಾಗ, ಪ್ರಕಾಶ್ ಅವರದ್ದೇ ಕಾರಿನ ಡಿಕ್ಕಿಯಲ್ಲಿ ತುಂಡರಿಸಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಡಿಎನ್‌ಎ ಪರೀಕ್ಷೆಯ ಮೂಲಕ ಮೃತದೇಹ ಪ್ರಕಾಶ್ ಅವರದ್ದೇ ಎಂದು ದೃಢಪಟ್ಟಿದೆ.

ಸಿಟಿವಿ ದೃಶ್ಯಾವಳಿಯಲ್ಲಿ ಮಹಿಳೆ ಸೇರಿದಂತೆ ಮೂವರು ಅನುಮಾನಾಸ್ಪದವಾಗಿ ಚೀಲ ಒಯ್ಯುತ್ತಿರುವುದು ಸೆರೆಯಾಗಿದೆ. ಹತ್ಯೆಯ ಬಳಿಕ ಪ್ರಕಾಶ್ ಅವರ ಪತ್ನಿ ಟೀನಾ ಹಾಗೂ ಮಗ ನಾಪತ್ತೆಯಾಗಿದ್ದು, ಭಾರತಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣದಲ್ಲಿ ಪತ್ನಿಯ ಪಾತ್ರ ಮತ್ತು ಆಕೆಗೆ ಪಾಕಿಸ್ತಾನಿ ಮೂಲದ ವ್ಯಕ್ತಿಯೊಂದಿಗೆ ಇದ್ದ ಎನ್ನಲಾದ ಅಕ್ರಮ ಸಂಬಂಧದ ಕೋನದಲ್ಲೂ ಶಾರ್ಜಾ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

- Advertisement -

Latest News

error: Content is protected !!