Thursday, June 25, 2026
Homeಕರಾವಳಿಉಡುಪಿಉಡುಪಿ: ವಿಷ ಜಂತು ಕಡಿದು ವ್ಯಕ್ತಿ ಸಾವು

ಉಡುಪಿ: ವಿಷ ಜಂತು ಕಡಿದು ವ್ಯಕ್ತಿ ಸಾವು

- Advertisement -
- Advertisement -

ಉಡುಪಿ:  ವಿಷ ಜಂತು ಕಡಿತದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ.ಮೃತರನ್ನು ಪಡುಬಿದ್ರಿ ಅಬ್ಬೇಡಿ ನಿವಾಸಿ ರಾಮ ದೇವಾಡಿಗ(60) ಎಂದು ಗುರುತಿಸಲಾಗಿದೆ.

ಇವರು ಗದ್ದೆಯಲ್ಲಿ ಹುಲ್ಲು ತೆಗೆಯುತ್ತಿರುವಾಗ ಕೈ ಬೆರಳಿಗೆ ವಿಷ ಜಂತು ಕಚ್ಚಿತ್ತೆನ್ನಲಾಗಿದೆ. ಇದರಿಂದ ಗಂಭೀರ ವಾಗಿ ಅಸ್ವಸ್ಥಗೊಂಡ ಇವರು ಚಿಕಿತ್ಸೆ ಫಲಕಾರಿಯಾಗದೆ ಮುಕ್ಕ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!