Wednesday, July 15, 2026
Homeಕರಾವಳಿಮಂಗಳೂರು: ವ್ಯಕ್ತಿಗೆ ದಂಪತಿಯಿಂದ ಚೂರಿ ಇರಿತ

ಮಂಗಳೂರು: ವ್ಯಕ್ತಿಗೆ ದಂಪತಿಯಿಂದ ಚೂರಿ ಇರಿತ

- Advertisement -
- Advertisement -

ಮಂಗಳೂರು: ರಾಜ್ ಕುಮಾರ್ ಎಂಬವರಿಗೆ ಭಜರಂಗ ದಳದ ಕಾರ್ಯಕರ್ತರು ಎನ್ನಲಾದ ಸಂಪತ್ ಕುಮಾರ್, ಚಿತ್ರಪ್ರಭಾ ಮತ್ತಾಕೆಯ ಗಂಡ ರಾಜೇಶ್ ಶೆಟ್ಟಿ ಎಂಬುವರು ರಾವ್ ಆಂಡ್  ರಾವ್ ಸರ್ಕಲ್ ಬಳಿ ನಿಂತಿದ್ದ  ವೇಳೆ  ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ.

ಕೃತ್ಯಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಆರೋಪಿಗಳು ರಾಜ್‌ಕುಮಾರ್‌ಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು, ಈ ವೇಳೆ ಸಮೀಪದ ಬಾರೊಂದರಲ್ಲಿದ್ದ ದಿನೇಶ್ ಪೂಜಾರಿ ಮಧ್ಯಪ್ರವೇಶಿಸಿದಾಗ ಅವರಿಗೆ ಕೈಯಿಂದ ಹಲ್ಲೆ ಮಾಡಿ ಚಾಕುವಿನಿಂದ ಇರಿದಿದ್ದರು ಎನ್ನಲಾಗಿದೆ. ಈ ಮಧ್ಯೆ ತಾನು ದಿನೇಶ್ ಪೂಜಾರಿಯನ್ನು ಹಿಂದಕ್ಕೆ ಸರಿಸಿದಾಗ ಸಂಪತ್ ಕುಮಾರ್ ಎಂಬಾತ ತನ್ನ ಕುತ್ತಿಗೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಗಾಯಾಳು ರಾಜ್‌ಕುಮಾರ್ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ಬಂದರು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!