Wednesday, June 24, 2026
Homeಕರಾವಳಿಉಡುಪಿಉಡುಪಿ: ಬಾವಿಗೆ ಹಾರಿ ವೃದ್ಧೆ ಆತ್ಮಹತ್ಯೆ

ಉಡುಪಿ: ಬಾವಿಗೆ ಹಾರಿ ವೃದ್ಧೆ ಆತ್ಮಹತ್ಯೆ

- Advertisement -
- Advertisement -

ಉಡುಪಿ: ಬಾವಿಗೆ ಹಾರಿ ವೃದ್ಧೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ರಹ್ಮಾವರ ತಾಲೂಕಿನ ಕಾಡೂರು ಗ್ರಾಮದ ತಂತ್ರಾಡಿ ಎಂಬಲ್ಲಿ ನಡೆದಿದೆ. ಗೋಪಾಲಕೃಷ್ಣ ಭಟ್‌  ಅವರ ಪತ್ನಿ ರುಕ್ಮಿಣಿ ಜಿ.ಕೆ ಭಟ್‌ (80)ಮೃತರು. ಅವರು ಕಳೆದ ಆರು ವರ್ಷಗಳಿಂದ ಸೋಡಿಯಂ ಕೊರತೆಯಿಂದ ಬಳಲುತ್ತಿದ್ದು, ಇದರಿಂದಾಗಿ ಆಗಾಗ ತಲೆ ತಿರುಗಿ ಬೀಳುವ ಸಮಸ್ಯೆಯಿಂದ ನರಳುತ್ತಿದ್ದರು.

ಈ ಆರೋಗ್ಯ ಸಮಸ್ಯೆಯಿಂದ ಮನನೊಂದು, ದಿನಾಂಕ 07.04.2026 ರಂದು ರಾತ್ರಿ ಸುಮಾರು 8.00 ಗಂಟೆಯಿಂದ 8.40 ಗಂಟೆಯ ಮಧ್ಯೆ ಮನೆಯ ತೋಟದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

- Advertisement -

Latest News

error: Content is protected !!