Wednesday, May 22, 2024
Homeಕರಾವಳಿಉಡುಪಿಉಡುಪಿಯಲ್ಲಿ ನ್ಯಾಯಾಧೀಶರನ್ನು ಬಿಡದ ಕೋವಿಡ್ ಸೋಂಕು

ಉಡುಪಿಯಲ್ಲಿ ನ್ಯಾಯಾಧೀಶರನ್ನು ಬಿಡದ ಕೋವಿಡ್ ಸೋಂಕು

spot_img
- Advertisement -
- Advertisement -

ಉಡುಪಿ : ಕರಾವಳಿ ಜಿಲ್ಲೆಗಳಲ್ಲಿ ಕೊರೊನಾ ಆರ್ಭಟ ದಿನೇ ದಿನೇ ಜೋರಾಗುತ್ತಿದೆ. ಯಾರನ್ನು ಬಿಡಲ್ಲ ಎಂಬಂತಿದೆ  ಕೋವಿಡ್ ರುದ್ರನರ್ತನ. ಅದರಲ್ಲೂ ಉಡುಪಿಯಲ್ಲಿ ಕಳೆದ ಒಂದು ವಾರದಲ್ಲಿ ಕೋವಿಡ್ ಪ್ರಕರಣಗಳು ದಿನ ದಿನದಿಂದ ಏರಿಕೆಯಾಗುತ್ತಲೇ ಇದೆ. ಇದೀಗ ಇಲ್ಲಿನ ಇಲ್ಲಿನ ನ್ಯಾಯಾಲಯದ ನ್ಯಾಯಾಧೀಶರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಈ ಹಿನ್ನಲೆಯಲ್ಲಿ ಉಡುಪಿ ನ್ಯಾಯಾಲಯ ಸಂಕೀರ್ಣವನ್ನು ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.

ನ್ಯಾಯಾಧೀಶರಿಗೆ ಕೋವಿಡ್ -19 ಸೋಂಕು ದೃಢವಾದ ಹಿನ್ನಲೆಯಲ್ಲಿ ಕೋರ್ಟ್ ಆವರಣವನ್ನು ಎರಡು ದಿನ ಸೀಲ್ ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗುವುದು. ಇಂದು ಮತ್ತು ನಾಳೆ ಕೋರ್ಟ್ ಸೀಲ್ ಡೌನ್ ಆಗಿರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಉಡುಪಿ ಜಿಲ್ಲೆಯಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಾಣುತ್ತಿದೆ. ನಿನ್ನೆ ಜಿಲ್ಲೆಯಲ್ಲಿ 98 ಜನರಿಗೆ ಕೋವಿಡ್ 19 ಸೋಂಕು ದೃಢವಾಗಿದೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 2321ಕ್ಕೆ ಏರಿಕೆಯಾಗಿದ್ದು. ಕೋವಿಡ್ ಸಮುದಾಯಕ್ಕೆ ಹರಡಿರೋದು ಸ್ಪಷ್ಟವಾಗುತ್ತಿದೆ.

- Advertisement -
spot_img

Latest News

error: Content is protected !!