- Advertisement -
![]()
- Advertisement -
ಉಡುಪಿ: ಕೆಲಸಕ್ಕೆಂದು ಹೋದ ಯುವಕ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಕುಂದಾಪುರ ತಾಲೂಕಿನ ಆಜ್ರಿ ಗಾಮದಲ್ಲಿ ನಡೆದಿದೆ. ಇಲ್ಲಿನ ಯಡ್ನಾಳಿ ಹುಂತಿರ್ಕಿ ಮನೆ ನಿವಾಸಿ ಅಮರ್ (29) ನಾಪತ್ತೆಯಾದವರು. ಅಮರ್ ಮಾರ್ಚ್ 3 ರಂದು ಸಿದ್ದಾಪುರಕ್ಕೆ ಕೆಲಸಕ್ಕೆಂದು ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿರುತ್ತಾರೆ.
6 ಅಡಿ ಎತ್ತರ, ಗೋಧಿ ಮೈಬಣ್ಣ, ಸಪೂರ ಶರೀರ ಹೊಂದಿದ್ದು ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆ ದೂ.ಸಂ: 08259-280299, ಕುಂದಾಪುರ ಠಾಣೆ ದೂ.ಸಂ: 08254-230338, ಎಸ್.ಡಿ.ಪಿ.ಒ: 08254-232338, ಡಿ.ಪಿ.ಒ: 0820-2534777, ರೇಂಜ್: 8242220501 ಅನ್ನು ಸಂಪರ್ಕಿಸುವAತೆ ಶಂಕರನಾರಾಯಣ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
- Advertisement -


