Tuesday, June 9, 2026
Homeಕರಾವಳಿಉಡುಪಿಉಡುಪಿ; ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಅಣ್ಣ ತಂಗಿಯನ್ನು ವಶಕ್ಕೆ ಪಡೆದ ಪೊಲೀಸರು

ಉಡುಪಿ; ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಅಣ್ಣ ತಂಗಿಯನ್ನು ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

ಉಡುಪಿ; ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಅಣ್ಣ ತಂಗಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಇಂದ್ರಾಳಿ ರೈಲು ನಿಲ್ದಾಣದಲ್ಲಿ ನಡೆದಿದೆ.

ಟಿಸಿ ಕೆ.ವಾಸುದೇವ್ ಪೈ, ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಕಾನೂನು ಪ್ರಕ್ರಿಯೆ ನಡೆಸಲು ರೈಲ್ವೆ ಆರ್.ಪಿ.ಎಫ್. ಸುಧೀರ್ ಶೆಟ್ಟಿ ಸಮ್ಮುಖ ಹಾಜರುಪಡಿಸಿದ್ದಾರೆ. ಇವರಿಬ್ಬರು ಸಹೋದರ ಸಹೋದರಿಯರಾಗಿದ್ದು, ಬೆಂಗಳೂರು ಬ್ಯಾಟರಾಯನಪುರದ ಆಂಜನೇಯ ಸ್ವಾಮಿ ದೇವಸ್ಥಾನ ಹತ್ತಿರದ ನಿವಾಸಿಗಳೆಂದು ತಿಳಿದುಬಂದಿದೆ.

ಇವರು ಹೆತ್ತವರಿಗೆ ತಿಳಿಸದೆ ಮನೆಬಿಟ್ಟು ಬಂದಿದ್ದು, ಮಕ್ಕಳ ಬ್ಯಾಗುಗಳಲ್ಲಿ ಸ್ಪಾನರುಗಳು ಇದ್ದವೆಂದು ವಿಚಾರಣೆಯಲ್ಲಿ ತಿಳಿದುಬಂದಿದೆ. ವಿಚಾರಣೆ ಪ್ರಕ್ರಿಯೆ ಮುಗಿದ ಬಳಿಕ ರೈಲ್ವೇ ಪೊಲೀಸರು ಹೆತ್ತವರಿಗೆ ಮಾಹಿತಿ ನೀಡಿದ್ದು, ಮಕ್ಕಳನ್ನು ನಿಟ್ಟೂರಿನಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಗೆ ಮಕ್ಕಳ ರಕ್ಷಣಾ ಘಟಕದ ಕೇಸ್ ವರ್ಕರ್ ಪ್ರಕಾಶ್, ಅಂಬಿಕಾ ಎಸ್. ಸಮಿತಿಗೆ ಒಪ್ಪಿಸಿದ್ದಾರೆ. ಕಾರ್ಯಚರಣೆಗೆ ಸಮಾಜಸೇವಕ ನಿತ್ಯಾನಂದ ಒಳಕಾಡು ಸಹಕರಿಸಿದರು. ಕಾನೂನು ಪ್ರಕ್ರಿಯೆ ಸಂದರ್ಭ ತನಿಖಾಧಿಕಾರಿ ಜಿನಾ ಪಿಂಟೋ ಹಾಜರಿದ್ದರು.

- Advertisement -

Latest News

error: Content is protected !!