Monday, May 6, 2024
Homeತಾಜಾ ಸುದ್ದಿರಾಜ್ಯ ಸರಕಾರ ದಿವಾಳಿಯಾಗಿದೆ, ಹಾಗಾಗಿ ಕೋಮು ವೈಷಮ್ಯ ವಿಚಾರಕ್ಕೆ ಪ್ರೇರಣೆ ನೀಡುತ್ತಿದೆ: ಯು.ಟಿ ಖಾದರ್

ರಾಜ್ಯ ಸರಕಾರ ದಿವಾಳಿಯಾಗಿದೆ, ಹಾಗಾಗಿ ಕೋಮು ವೈಷಮ್ಯ ವಿಚಾರಕ್ಕೆ ಪ್ರೇರಣೆ ನೀಡುತ್ತಿದೆ: ಯು.ಟಿ ಖಾದರ್

spot_img
- Advertisement -
- Advertisement -

ಮಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮು ವೈಷಮ್ಯ ವಿಚಾರದಿಂದಾಗ ಕರ್ನಾಟಕದ ಘನತೆ, ಗೌರವಕ್ಕೆ ಧಕ್ಕೆ ಉಂಟಾಗಿದೆ. ಧಾರವಾಡ ಘಟನೆಯನ್ನು ಸರ್ವ ಧರ್ಮೀಯರು ಖಂಡಿಸಿದ್ದಾರೆ. ಇಂತಹ ವಿಚಾರ ರಾಜ್ಯ ಸರಕಾರಕ್ಕೆ ತಿರುಗುಬಾಣವಾಗಲಿದೆ. ರಾಜ್ಯ ಸರಕಾರ ದಿವಾಳಿಯಾಗಿದೆ, ಹಾಗಾಗಿ ಇಂತಹದ್ದಕ್ಕೆ ಪ್ರೇರಣೆ ನೀಡುತ್ತಿದೆ. ಸಿಎಂ ಮೌನವಾಗಿ ರಾಜ್ಯವನ್ನು ಗೂಂಡಾಗಳ ಕೈಗೆ ಕೊಟ್ಟಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯು.ಟಿ ಖಾದರ್ ವಾಗ್ದಾಳಿ ನದೆಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಪಕ್ಷದ ನಾಯಕರು, ಸಚಿವರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಸಿಎಂ ಈಗಲಾದರೂ ಮಾತಾಡಬೇಕು. ಜನತೆಯಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು. ಕೋಮುವಾದಿಗಳನ್ನು ಮಟ್ಟ ಹಾಕಬೇಕು. ಇಲ್ಲದಿದ್ದರೆ ಅದನ್ನು ಸರಕಾರ ಎನ್ನಲಾಗದು ಎಂದರು.

ಸರಕಾರ, ಮಾಧ್ಯಮಗಳಿಗೆ ದೊಡ್ಡ ಜವಾಬ್ದಾರಿ ಇದೆ. ಮಾಧ್ಯಮಗಳು ಎರಡು ಬಾರಿ ನಿರ್ಲಕ್ಷ್ಯ ಮಾಡಿದ್ರೆ ಅವರು ಸುಮ್ಮನಾಗುತ್ತಾರೆ. ಫ್ಲೆಕ್ಸ್ ಹಾಕಿದ ಕೂಡಲೇ ಪ್ರಚಾರ ಕೊಟ್ಟರಷ್ಟೇ ಸುದ್ದಿಯಾಗುತ್ತದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಬಗ್ಗೆ ಒಂದು ವಾರ ಚರ್ಚೆ ಮಾಡಿ ಮಾಧ್ಯಮಗಳು ಯಾಕಾಗಿ ಅದನ್ನ ಮಾಡ್ತಿಲ್ಲ ಅನ್ನೋದು ನಂಗೆ ಅಚ್ಚರಿ ಆಗ್ತಿದೆ ಎಂದಿದ್ದಾರೆ.

- Advertisement -
spot_img

Latest News

error: Content is protected !!