Friday, June 5, 2026
Homeತಾಜಾ ಸುದ್ದಿಮಂಗಳೂರು: ಗೋಕಳವು ಆರೋಪಿ ಬಂಧನ: ಇನ್ನುಳಿದ ಆರೋಪಿಗಳಿಗೆ ಮುಂದುವರಿದ ಶೋಧ

ಮಂಗಳೂರು: ಗೋಕಳವು ಆರೋಪಿ ಬಂಧನ: ಇನ್ನುಳಿದ ಆರೋಪಿಗಳಿಗೆ ಮುಂದುವರಿದ ಶೋಧ

- Advertisement -
- Advertisement -

ಮಂಗಳೂರು: ನಗರದ ಮರವೂರಿನಲ್ಲಿರುವ ಕಪಿಲ ಗೋಶಾಲೆಯ ಮೇಯಲು ಬಿಟ್ಟ ಜಾನುವಾರು ಕಳವುಗೈದ ಆರೋಪಿಯನ್ನು ಬಜ್ಪೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಬಜ್ಪೆ ಭಟ್ರಕೆರೆ ನಿವಾಸಿ ಮಹಮ್ಮದ್ ರಾಝಿಕ್ (19) ಬಂಧಿತ ಆರೋಪಿ. ನಗರದ ಮರವೂರಿನಲ್ಲಿರುವ ಕಪಿಲ ಗೋಶಾಲೆಯ ಮೇಯಲು ಬಿಟ್ಟ ಒಂದು ಹೋರಿ ಹಾಗೂ ಕಪಿಲ ತಳಿಯ ಎರಡು ಹಸುಗಳನ್ನು ಗೋಕಳ್ಳರು ಕಳವುಗೈದಿದ್ದಾರೆ. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಹಮ್ಮದ್ ರಾಝಿಕ್ ನನ್ನು ಕೆಂಜಾರು ಮರವೂರಿನಲ್ಲಿ ಬಂಧಿಸಿದ್ದಾರೆ. ಅಲ್ಲದೆ ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳು ಶಾಮೀಲಾಗಿದ್ದು, ಅವರನ್ನು ಶೀಘ್ರ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!