Saturday, June 6, 2026
Homeತಾಜಾ ಸುದ್ದಿತಾಯಿಯಾಗುತ್ತಿರುವ ಸುದ್ದಿ ಹಂಚಿಕೊಂಡ ನಟಿ ಪ್ರಣಿತಾ ಸುಭಾಶ್; ಇನ್ಸ್ಟಾಗ್ರಾಮ್ ನಲ್ಲಿ ಪತಿಯ ಜೊತೆಗಿನ ವಿಶೇಷ ಫೋಟೋ...

ತಾಯಿಯಾಗುತ್ತಿರುವ ಸುದ್ದಿ ಹಂಚಿಕೊಂಡ ನಟಿ ಪ್ರಣಿತಾ ಸುಭಾಶ್; ಇನ್ಸ್ಟಾಗ್ರಾಮ್ ನಲ್ಲಿ ಪತಿಯ ಜೊತೆಗಿನ ವಿಶೇಷ ಫೋಟೋ ಜೊತೆ ಗುಡ್ ನ್ಯೂಸ್

- Advertisement -
- Advertisement -

ಬಹುಭಾಷಾ ನಟಿ, ಕನ್ನಡತಿ ಪ್ರಣಿತಾ ಸುಭಾಷ್ ಅವರು ತಾಯಿ ಆಗುತ್ತಿದ್ದಾರೆ. ಸ್ಪೆಷಲ್ ಫೋಟೋ ಮೂಲಕ ಅವರು ಈ ಗುಡ್ ನ್ಯೂಸ್ ನೀಡಿದ್ದಾರೆ.


ಖ್ಯಾತ ನಟಿ ಪ್ರಣಿತಾ ಸುಭಾಷ್  ಅವರು ಗುಡ್ ನ್ಯೂಸ್ ನೀಡಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ಇತ್ತೀಚಿನ ದಿನಗಳಲ್ಲಿ ಕುಟುಂಬದ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಈಗ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ತಾವು ತಾಯಿಯಾಗುತ್ತಿರುವ ಸುದ್ದಿಯನ್ನು ಪ್ರಣಿತಾ ಸುಭಾಷ್ ತಿಳಿಸಿದ್ದಾರೆ.


 ಸೋಶಿಯಲ್ ಮೀಡಿಯಾದಲ್ಲಿ ಪತಿ ಜೊತೆಗಿನ ಸ್ಪೆಷಲ್ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಈ ಸಿಹಿ ಸುದ್ದಿಯನ್ನು ಅವರು ಹಂಚಿಕೊಂಡಿದ್ದಾರೆ. ನನ್ನ ಪತಿಯ 34ನೇ ವರ್ಷದ ಜನ್ಮದಿನಕ್ಕೆ ಏಂಜೆಲ್‌ಗಳು ನಮಗೆ ಉಡುಗೊರೆ ನೀಡಲಿವೆ’ ಎಂದು ಅವರು ಕ್ಯಾಪ್ಟನ್ ನೀಡಿದ್ದಾರೆ. ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ಸ್ನೇಹಿತರು ಪ್ರಣಿತಾ ಸುಭಾಷ್‌ಗೆ ಅಭಿನಂದನೆ ತಿಳಿಸುತ್ತಿದ್ದಾರೆ.

2021ರ ಮೇ ತಿಂಗಳಲ್ಲಿ ಉದ್ಯಮಿ ನಿತಿನ್ ಜೊತೆ ಪ್ರಣಿತಾ ಹಸೆಮಣೆ ಏರಿದರು. ಕೊವಿಡ್ ಮುಂಜಾಗ್ರತೆ ಕ್ರಮವಾಗಿ ಕೇವಲ ಆಪ್ತರ ಸಮ್ಮುಖದಲ್ಲಿ ಅವರ ಮದುವೆ ಸಮಾರಂಭ ನಡೆದಿತ್ತು.


ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಪ್ರಣಿತಾ ಸುಭಾಷ್ ಅವರನ್ನು ಪತಿ ನಿತಿನ್ ರಾಜು ಎತ್ತಿಕೊಂಡಿದ್ದಾರೆ. ಖುಷಿಯಲ್ಲಿ ತೇಲುತ್ತಿರುವ ಪ್ರಣಿತಾ ಕೈಯಲ್ಲಿ ಸ್ಕ್ಯಾನಿಂಗ್ ಕಾಪಿ ಇದೆ. ಇನ್ನೊಂದು ಫೋಟೋದಲ್ಲಿ ದಂಪತಿಗಳು ಪ್ರೆಗ್ನೆನ್ಸಿ ಟೆಸ್ಟಿಂಗ್ ಕಿಟ್ ಹಿಡಿದು ಪೋಸ್ ನೀಡಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.

- Advertisement -

Latest News

error: Content is protected !!