Friday, June 5, 2026
Homeತಾಜಾ ಸುದ್ದಿವೇಣೂರು ಪೆರ್ಮುಡ ಕಂಬಳದಲ್ಲಿ ನೂತನ ದಾಖಲೆ ಸೃಷ್ಟಿಸಿದ ಕಂಬಳ ಓಟಗಾರ ನಿಶಾಂತ್ ಶೆಟ್ಟಿ

ವೇಣೂರು ಪೆರ್ಮುಡ ಕಂಬಳದಲ್ಲಿ ನೂತನ ದಾಖಲೆ ಸೃಷ್ಟಿಸಿದ ಕಂಬಳ ಓಟಗಾರ ನಿಶಾಂತ್ ಶೆಟ್ಟಿ

- Advertisement -
- Advertisement -

ಮಂಗಳೂರು: ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳದಲ್ಲಿ ಈ ಬಾರಿ ಹೊಸ ದಾಖಲೆಯೊಂದು ಸೃಷ್ಟಿಯಾಗಿದೆ. ಕಂಬಳ ಓಟಗಾರ ಬಜಗೋಳಿ ಜೋಗಿಬೆಟ್ಟು ನಿವಾಸಿ ನಿಶಾಂತ್ ಶೆಟ್ಟಿ  ನೂತನ ದಾಖಲೆ ಸೃಷ್ಟಿಸಿದ್ದಾರೆ.

ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳದ ಹಗ್ಗ ಹಿರಿಯ ವಿಭಾಗದ ಕಂಬಳ ಓಟದಲ್ಲಿ ನಿಶಾಂತ್ ಶೆಟ್ಟಿಯವರು 125 ಮೀ. ದೂರವನ್ನು ಕೇವಲ 10.44 ಸೆಕೆಂಡ್‌ನಲ್ಲಿ  ಗುರಿಮುಟ್ಟಿದ್ದಾರೆ. ಇದನ್ನು 100 ಮೀ.ಗೆ ಹೋಲಿಸಿದರೆ 8.36 ಸೆಕೆಂಡ್ ಆಗುತ್ತದೆ. ಕಂಬಳದಲ್ಲಿ ದಾಖಲೆಯನ್ನು ಈವರೆಗೂ ಯಾರೂ ಮಾಡಿಲ್ಲ.

ಕಳೆದ ವರ್ಷ ಕಕ್ಕೆಪದವಿನ ಸತ್ಯ – ಧರ್ಮ ಜೋಡುಕರೆ ಕಂಬಳದಲ್ಲಿ 100 ಮೀಟರ್ ಅನ್ನು ಕಂಬಳ ಓಟಗಾರ ಶ್ರೀನಿವಾಸ ಗೌಡ ಎಂಬುವರು 8.78 ಸೆಕೆಂಡ್‌ಗಳಲ್ಲಿ ತಲುಪಿ ದಾಖಲೆ ಸೃಷ್ಟಿಸಿದ್ದರು. ಇದೀಗ ಈ ದಾಖಲೆಯನ್ನು ಕಂಬಳ ಓಟಗಾರ ನಿಶಾಂತ್ ಶೆಟ್ಟಿ ಮುರಿದಿದ್ದಾರೆ.

- Advertisement -

Latest News

error: Content is protected !!