Thursday, June 4, 2026
Homeಕರಾವಳಿಶಾಸಕ ಯು.ಟಿ.ಖಾದರ್ ಗನ್ ಮ್ಯಾನ್ ಗೆ ಕೊರೋನಾ ಪಾಸಿಟಿವ್

ಶಾಸಕ ಯು.ಟಿ.ಖಾದರ್ ಗನ್ ಮ್ಯಾನ್ ಗೆ ಕೊರೋನಾ ಪಾಸಿಟಿವ್

- Advertisement -
- Advertisement -

ಮಂಗಳೂರು : ಶಾಸಕ ಯು.ಟಿ.ಖಾದರ್ ಗನ್ ಮ್ಯಾನ್ ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಖಾದರ್ ಜೊತೆ ಎಸ್ಕಾರ್ಟ್ ವಾಹನದಲ್ಲಿದ್ದ ಮಂಗಳೂರಿನ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ಇರೋದು ದೃಢವಾಗಿದೆ.

ಹೀಗಾಗಿ ಎಸ್ಕಾರ್ಟ್ ವಾಹನದಲ್ಲಿದ್ದ ಉಳಿದ ಮೂವರನ್ನು ಕ್ವಾರಂಟೈನ್ ಮಾಡಲಾಗಿದೆ. ಇನ್ನು ಕಳೆದ ಹತ್ತು ದಿನದ ಹಿಂದೆ ಅನಾರೋಗ್ಯ ಎಂದು‌ ಇವರು ಮನೆಯಲ್ಲಿದ್ದರು. ಅಲ್ಲದೇ ಕೋವಿಡ್ -19 ಪರೀಕ್ಷೆ ನಡೆಸಿದ್ದರು. ಇವತ್ತು ಬಂದ ವರದಿಯಲ್ಲಿ ಕೊರೊನಾ ಪಾಸಿಟಿವ್ ಎಂದು ಗೊತ್ತಾಗಿದೆ. ಅವರನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಇವರ ಪ್ರಾಥಮಿಕ ಸಂಪರ್ಕವನ್ನು ಮತ್ತೆ ಹಚ್ಚಲಾಗುತ್ತಿದ್ದು, ಶಾಸಕ ಯು ಟಿ ಖಾದರ್ ಅವರೂ ಕೂಡ ಕ್ವಾರಂಟೈನ್ ಗೂ ಒಳಗಾಗುವ ಸಾಧ್ಯತೆ ಇದೆ.

ಇನ್ನು ಕೆಲ ದಿನಗಳ ಹಿಂದೆ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಭಾಗಿಯಾಗಿ ಯು.ಟಿ. ಖಾದರ್ ಅವರು ವಿವಾದಕ್ಕೆ ಗುರಿಯಾಗಿದ್ದರು.

- Advertisement -

Latest News

error: Content is protected !!